ಕಾಂಗ್ರೆಸ್ ಟಾಸ್ಕ್ ಫೋರ್ಸ್ ಸಮಿತಿಯಿಂದ ಕಿಟ್ ವಿತರಣೆ

ಕಾಂಗ್ರೆಸ್ ಟಾಸ್ಕ್ ಫೋರ್ಸ್ ಸಮಿತಿಯಿಂದ ಕಿಟ್ ವಿತರಣೆ

ಹರಪನಹಳ್ಳಿ, ಮೇ 12- ಪುರಸಭೆಯ 120 ಕ್ಕೂ ಹೆಚ್ಚು ಪೌರಕಾರ್ಮಿಕರಿಗೆ ಕಾಂಗ್ರೆಸ್ ಟಾಸ್ಕ್ ಫೋರ್ಸ್ ಸಮಿತಿ ವತಿಯಿಂದ ತರಕಾರಿ ಹಾಗೂ ದವಸ, ಧಾನ್ಯಗಳ ಕಿಟ್ ವಿತರಿಸಲಾಯಿತು.
ಶಾಸಕ ಪಿ.ಟಿ. ಪರಮೇಶ್ವರನಾಯ್ಕ, ಟಾಸ್ಕ್‌ ಫೋರ್ಸ್ ಜಿಲ್ಲಾ ಸಮಿತಿ ಸದಸ್ಯ ಶಶಿಧರ ಪೂಜಾರ, ಉಚ್ಚಂಗಿದುರ್ಗ, ಹರಪನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಲೂರು ಅಂಜಪ್ಪ, ಜಿ.ಪಂ. ಸದಸ್ಯರಾದ ಹೆಚ್.ಬಿ. ಪರಶುರಾಮಪ್ಪ, ದಾವಣಗೆರೆ ಜಿಲ್ಲಾ ಮಡಿವಾಳ ಸಮಾಜದ ಅಧ್ಯಕ್ಷ ಯರಬಳ್ಳಿ ಉಮಾಪತಿ ಪುರಸಭೆ ಸದಸ್ಯರಾದ ಲಾಟಿ ದಾದಾಪೀರ್, ಗಣೇಶ್, ಜಾಕೀರ್, ಭರತ್, ಜಿ.ಪಂ. ಮಾಜಿ ಸದಸ್ಯ ಎಂ.ಟಿ. ಬಸವನಗೌಡ ಉಪಸ್ಥಿತರಿದ್ದರು.
 ವಕೀಲರುಗಳಾದ ಮತ್ತಿಹಳ್ಳಿ ಅಜ್ಜಣ್ಣ, ಕೆ. ಬಸವರಾಜ, ಎಚ್.ಕೆ. ಹಾಲೇಶ, ಮುಖಂಡರಾದ ಮುತ್ತಿಗಿ ಜಂಬಣ್ಣ, ಕಡಕೋಳ ನೂರುದ್ದೀನ್, ಇಜಾರಿ ಮಹಾವೀರ, ಅರಸಿಕೇರಿ ಮರಿಯಮಪ್ಪ, ಪಿ. ಪ್ರೇಮಕುಮಾರ, ಮಾಬುಸಾಬ್, ಶಿವಕುಮಾರನಾಯ್ಕ, ಪುಣಬಗಟ್ಟಿ ಹನುಮಂತಪ್ಪ, ಶ್ರೀಕಾಂತ, ಶೃಂಗಾರ ತೋಟದ ಬಸವರಾಜ ಹಾಗೂ ಇನ್ನಿತರರಿದ್ದರು.