ಕಂಡಂಗೆಲ್ಲಾ ಐತೆ….

ಕಂಡಂಗೆಲ್ಲಾ ಐತೆ….

ಅಣುರೇಣು ತೃಣಕಾಷ್ಟಗಳಲ್ಲಿ
ದೇವರ ಕಂಡ ಹಳೇ ಕವಿ…!
ಕಾಯಕದಲ್ಲಿ ಮಧ್ಯದ ಕವಿ
ಪ್ರಕೃತಿಯಲಿ ನವೋದಯ ಕವಿ
ಪ್ರಗತಿ ನವ್ಯ ಬಂಡಾಯ ನವ್ಯೋತ್ತರದೊಳು..
ದೇವರೇ ಮಾಯ!
ಇಂದಿಗೂ ಸೂರ್ಯ ಚಂದ್ರರು
ಬಿಟ್ಟಿಲ್ಲ ತಮ್ಮ ಕಾಯಕ ನ್ಯಾಯ…!

ಸೂರ್ಯ ಕೆಂಗೆನ್ನೆ ತರೀಕೆರೆ