ಓ ಗಿಡ ಮರಗಳೇ…

ಓ ಗಿಡ ಮರಗಳೇ…

ಗಿಡವಾಗಿ ಹುಟ್ಟಿ ಮರವಾಗಿ ಬೆಳೆದು
ದಾರಿ ಹೋಕರಿಗೆಲ್ಲ ನೆರಳಾಗಿನಿಂದು
ಮರೆಯಾಗುತಿರುವೆ ಏಕೆ ಇಂದು
ನಿಮ್ಮ ಉಳಿವಿಗಾಗಿ ಪರಿತಪಿಸುತ್ತಿರುವೆ ನೊಂದು.
ಮಲಿನವಾದ ಜಗದಲಿ ನಿಮ್ಮ ಸರ್ವನಾಶ
ಪ್ರಾಣಿ ಪಕ್ಷಿ ಗಳಿಗೆ ನೀವಿಲ್ಲದೆ ಬದುಕೇ ನಾಶ
ಕವಿಕಬ್ಬಿಗರಿಗೆ ನಿಮ್ಮ ಹಸಿರೆ ಪದಗಳ ಕೋಶ
ಗಿಡಮರಗಳ ಅಳಿವೆ ನಿಸರ್ಗದ ವಿನಾಶ.
ಆ ಕಡೆ ಜಾಗತೀಕರಣ ಹೆಸರಲಿ ಗಿಡಮರಗಳ ಮರಣ
ಈ ಕಡೆ ವನ್ಯಜೀವಿಗಳ ಉಳಿವಿಗೆ ಸರಕಾರದ ಕಂಕಣ
ಬೇಲಿಯೇ ಎದ್ದು ಹೊಲ ಮೇದಂತಾಗುತಿದೆ ನೋಡಣ್ಣ
ಗಿಡಮರಗಳುಳಿಯದಿದ್ದರೆ ನಮ್ಮ ಉಸಿರೇ ಇಲ್ಲಾಣ್ಣ.
ಓ ಮಾನವರೇ ತೋರಿ ಕರುಣೆ ಮಾಡಿ ಸಂರಕ್ಷಣ
ಹಸುರು ತುಂಬಲಿ ಜಗದಲಿ ಹಾಕದಿರಿ ಕಡಿವಾಣ
ಗಿಡಮರಗಳ ಉಳಿವಿಗಾಗಿ ನಾವೆಲ್ಲ ಕೈ ಜೋಡಿಸೋಣ
ಮನೆಗೊಂದು ಮರ ಊರಿಗೊಂದು ವನದಂತೆ ಬೆಳೆಸೋಣ.

ಎಲ್. ಎಸ್. ಸಂದೀಪ
ದಾವಣಗೆರೆ.