ಎರಕವ ಹೊಯ್ದ

ಎರಕವ ಹೊಯ್ದ

ಯಾವ ಚಿತ್ರಗಾರ ಚಿತ್ರಿಸಿ
ಬರೆದ ದೃಶ್ಯವೋ?
ಯಾವ ಕುಂಚದಲಿ ಬರೆದರೆ
ಇಂತಹ ನಿಸರ್ಗ ಚಿತ್ರಿಸಬಹುದು?
ಅಷ್ಟೇ ತಿಳಿನೀರಿನ
ಆಕಾಶದ ಕೆಂದೂಳಿನ ರಮಣೀಯ
ಹುಲ್ಲಿನ ಹಸಿರಿನ ಬದು,
ಗಿಡದ ನೆರಳಿನ ಜೊತೆ
ಸೂರ್ಯ ಮುಳುಗಿದ ಸಂಜೆ
ಸಂಕೀರ್ಣ ಸಮಯ
ಒಟ್ಟುಗೂಡಿಸಿ ಏಕ ಚಿತ್ರ
ಚಿತ್ರಿಸುವ ಕಲೆಗಾರ
ನಿಸರ್ಗಪತಿ, ಮರ ಮಾತ್ರ
ಕಪ್ಪಾಗಿ ಕಾಣಿಸುವ ಛಾಯಾ
ದೂರದ ಸುಂದರ ಗುಡ್ಡ
ಗಾಡು ಕಾಣಿಸುವ ಪಾರದರ್ಶಕತೆ.
ಯಾರು ಮಾಡಲು ಸಾಧ್ಯ
ಬ್ರಹ್ಮ/ಸೂರ್ಯ/ದೇವನಲ್ಲದೆ?
ಪ್ರಕೃತಿ ಸಿರಿ ಅಂದಾಜಿಸುವ
ಎಣಿಕೆ ಇಲ್ಲದ, ಕ್ಷಣ ಕ್ಷಣಕ್ಕೂ
ಬಣ್ಣ ದೃಶ್ಯ ಸುಂದರ
ನೋಡುವ ಸೊಬಗು ಹಳ್ಳಿ
ಮಕ್ಕಳಿಗಲ್ಲದೆ ಬೇರಾರಿಗೂ
ಇಲ್ಲ ಎಂಬುದೇ ಶ್ರೀಮಂತಿಕೆ.

ಡಾ. ರೇವಣ್ಣ ಬಳ್ಳಾರಿ, ಸಾಹಿತಿ
ನ್ಯಾಯವಾದಿ, ಹೈ ಕೋರ್ಟ್, ದಾವಣಗೆರೆ.