ಅವ್ವ ನನ್ನವ್ವ…

ಅವ್ವ ನನ್ನವ್ವ…

ಅಮ್ಮಾ..ಎರಡಕ್ಷರದಲಿ..ಎಂತಹ..ಶಕ್ತಿ!!
ಬಾಲ್ಯದಲ್ಲೇ ಬಾನಂಗಳದಲ್ಲಿ ಚಂದಮಾಮನ ತೋರಿಸಿದಾಕೆ
ನಿನ್ನ ವ‌‌ರ್ಣಿಸಲು ಈ ಪದಪುಂಜಗಳೇ ಸಾಲುತಿಲ್ಲವೇಕೆ..!!
ತೊಟ್ಟಿಲ ತೂಗಿದ ನಿನ್ನಯ ಆ ಕೈ ಸಕಲವನ್ನೂ ನೀಡುವ ಸಾಧನವೇ ಸೈ!!
ನವಮಾಸಗಳ ತನಕ ತುಂಬಿದ ನಿನ್ನ ಒಡಲು
ಒಡಲಿನ ಶಕ್ತಿ ಹೆಜ್ಜೆ ಮೇಲೆ ಹೆಜ್ಜೆಯನ್ನಿಟ್ಟು ಕಲಿಸಿತು ಒಲವು!!
ಮಾತೆಯ ಮಡಿಲು ಕರುಣೆ ತುಂಬಿದ ಕಡಲು!!
ಎಷ್ಟೇ ದೂರವಿದ್ದರೂ ಅರಸಿ ಬರುವೆ ಮಡಿಲ ಕಾಣಲು!!
ನಾ ಕೊಟ್ಟ ಕಷ್ಟವನ್ನೆಲ್ಲ ಸಹಿಸಿಕೊಂಡು ನೀ ಕೊಟ್ಟೆ ಜೀವ
ನೀ ನನಗೆ ಎಂದೆಂದೂ ಸೋಜಿಗದ ಹೂವ!!
ತಾ ಉಣ್ಣುವ ತುತ್ತನ್ನೇ ನನಗಿಟ್ಟ ಕರುಣಾಮಯಿ ನೀನವ್ವ
ನಿಸ್ವಾರ್ಥ ಬತ್ತದ ಅಕ್ಕರೆಯ ಆಗರ ನೀನವ್ವ ಪ್ರೀತಿಯ ನನ್ನವ್ವ!!

ಬಸವರಾಜ ಜಿ.ಎಸ್
ಹಿರಿಯ ಅಭಿವೃದ್ಧಿ ವ್ಯವಸ್ಥಾಪಕರು, ಎಸ್.ಬಿ.ಐ.ಬ್ಯಾಂಕ್, ಬೆಂಗಳೂರು.