ಇಂಗ್ಲೆಂಡ್‌ನಲ್ಲಿ ದಾವಣಗೆರೆಯ ಕನ್ನಡಿಗ ಶುಶ್ರೂಷಕ ಪ್ರವೀಣ್ ಕುಮಾರ್ ಸೇವೆ


ದಾವಣಗೆರೆ, ಮೇ 11- ನಗರದ ಬಾಪೂಜಿ ಕಾಲೇಜ್ ಆಫ್ ನರ್ಸಿಂಗ್‌ನ ವಿದ್ಯಾರ್ಥಿ ಪ್ರವೀಣ್‌ ಕುಮಾರ್‌ ಅವರು ಕಳೆದ 18 ವರ್ಷಗಳಿಂದ ಇಂಗ್ಲೆಂಡ್‌ನಲ್ಲಿದ್ದು, ಯುನೈಟೆಡ್ ಕಿಂಗ್ ಡಂನ ಬರ್ಕ್ ಶೈರ್ ರಾಜ್ಯದ ರಾಯಲ್ ಬರ್ಕ್ ಶೈರ್‌ ಜಿಲ್ಲಾ ಆಸ್ಪತ್ರೆಯಲ್ಲಿ ಶುಶ್ರೂಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಲಂಡನ್ ನಗರದ ಬರ್ಮಿಂನ್‌ ಹ್ಯಾಮ್‌ನಲ್ಲಿರುವ ಎನ್.ಹೆಚ್.ಎಸ್.ನ ವಿವಿಧ ಆಸ್ಪತ್ರೆಗಳಲ್ಲಿ ನರ್ಸಿಂಗ್ ಎಜುಕೇಟರ್ ಆಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ರಾಯಲ್ ಬರ್ಕ್ ಶೈರ್‌ ಜಿಲ್ಲಾ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕಳೆದ ಫೆಬ್ರವರಿಯಿಂದ ಬರ್ಕಶೈರ್‌ನ ಆಸ್ಪತ್ರೆಗಳಲ್ಲಿ 2200 ಕೊರೊನಾ ಸೋಂಕಿತರು ದಾಖಲಾಗಿದ್ದಾರೆ. ಮೃತರ ಸಂಖ್ಯೆ 469 ಇದ್ದು, ಏಳು ವಾರಗಳ ಲಾಕ್‌ಡೌನ್ ಅವಧಿ ಇದೀಗ ಮುಗಿದಿದ್ದು, ತಜ್ಞ ವೈದ್ಯರ ತಂಡದ ಜೊತೆ ಶುಶ್ರೂಷಕ ಎಂ. ಪ್ರವೀಣ್ ಕುಮಾರ್ ಅವರು ಹಗಲು-ರಾತ್ರಿ ಕರ್ತವ್ಯ ನಿರ್ವಹಿಸುವ ಮೂಲಕ ಕೊರೊನಾ ಸೋಂಕಿತರಿಗೆ ಧೃತಿಗೆಡದೆ ಸೇವೆ ಸಲ್ಲಿಸುತ್ತಿರುವುದು ಅಭಿನಂದನಾರ್ಹವಾಗಿದೆ.
ಪ್ರವೀಣ್ ಕುಮಾರ್ ಅವರು ನಗರದ ಹಿರಿಯ ಕಲಾವಿದ ಮತ್ತು ಮಾಜಿ ಜಿಲ್ಲಾ ಕಮಾಂಡೆಂಟ್ ಎ. ಮಹಲಿಂಗಪ್ಪ ಮತ್ತು ನಾಗರತ್ನ ದಂಪತಿಯ ಹಿರಿಯ ಪುತ್ರ.