ಕುಲ್ಡ, ಕುಂಟ, ಕಿವ್ಡರ, ಪಾನ ಪ್ರೇಮ

ಕುಲ್ಡ, ಕುಂಟ,  ಕಿವ್ಡರ,  ಪಾನ ಪ್ರೇಮ

ಕುಲ್ಡ ಸರ್ಕಾರಗಳು ಕುಂಟ ನೇತಾರರು
ಕಿವ್ಡ ಪ್ರಜೆಗಳಿರೊ ಈ ಪ್ರಜಾಪ್ರಭುತ್ವವು
ಕಾಳಜಿಯ ಗುರುವಾಣಿಗಳಿಗೆ ಶಿರಬಾಗೀತೆ?

ಎಲ್ಲಾ ಮೀರಿದೀ ಸಾಧಕ ಶಿರೋಮಣಿ
ಕುಡ್ಕ ಕೆಡ್ಕ ಒಡ್ಕರ ಮನ ತಾಕಲುಂಟೇ ?

ಇನ್ನೊಂದು ವೈಯಾರಿ ವೈರಸ್ ಹುಟ್ಟಿ
ಬೆನ್ನಟ್ಟಬೇಕಷ್ಟೆ ಈ ಪಾನಪ್ರೇಮಿಗಳ !

 ಪಾನಿ ನಿಷೇಧ ಮಾಡಿದರೆ ಮಾಡಿಬಿಡಿ
ಪಾನ ನಿಷೇಧ ಮಾಡ ಬಿಡೆವೆಂಬರಿವರು!

ನಿಜಸ್ತ್ರೀಪುರುಷರು ಮುನಿದೇಳದಿದ್ದಲ್ಲ
ಉನ್ಮತ್ತ ಕುಡುಕಕುಡುಕಿಯರಟ್ಟಹಾಸವು
ಚಟ್ಟ ಸೇರುವುದ ಕಾಣೆವೋ ಕಾವ್ಯಾತ್ಮಾ.

 – ಆರ್. ಶಿವಕುಮಾರಸ್ವಾಮಿ ಕುರ್ಕಿ
shivukurki1@gmail.com