ವಂದನೆ ವಂದನೆ ವಂದನೆ…

ವಂದನೆ ವಂದನೆ ವಂದನೆ…

ಕೊರೊನಾ ಕೊರೊನಾ ಕೊರೊನಾ
ವಿಶ್ವದೆಲ್ಲೆಡೆ ಇಂದು ಕ್ರೂರಿ-ವೈರಿ,
ಕೊರೋನ ವೈರಸ್ ಕರಾಳ ದಿನಾಚರಣೆ…
ಶಂಕಿತರು ಸೋಂಕಿತರು ಸಾವಿರಾರು,
ಸಾವಿನ ದವಡೆ ಸೇರಿದವರೂ ಅಪಾರ…!!!
ತಲ್ಲಣಿಸದಿರು ಮನುಜ ಕುಲವೇ….!!!
ಮದ್ದಿಲ್ಲದೆ ಹುಟ್ಟಿ ಸದ್ದಿಲ್ಲದೇ ಹರಡಿ,
ಕಾಣದಂತೆ ಮರಣ ಮೃದಂಗ ಭಾರಿಸುವ
ಆಘಾತಕಾರಿ ಅಪಾಯಕಾರಿ ಅಣುವಿನ ಹುಟ್ಟಡಗಿಸಿ….
ಮನೆಯೇ ಮದ್ದು, ಕೆಲವೇ ದಿನ
ಮನೆಯಲ್ಲಿರೋಣ….!!
ಭೀಕರ ಅಣು ಸೋಂಕದಂತೆ ತಡೆಯೋಣ…!!
ಸರ್ಕಾರಿ  ಆದೇಶ ಪಾಲಿಸೊಣ,
ಮೋದಿ-ಜೀ ರವರ ಆರೋಗ್ಯ
ಭಾರತ ಸಂಕಲ್ಪಕ್ಕೆ ಕೈ ಜೋಡಿಸೋಣ…..
ಬದುಕಿನ ಹಂಗು ತೊರೆದು,
ಹಗಲಿರುಳು ಶ್ರಮಿಸುತ್ತಿರುವ ವೈದ್ಯರುಗಳಿಗೆ,
ಪೊಲೀಸ್ ಬಂಧುಗಳಿಗೆ, ಆಡಳಿತ ಅಧಿಕಾರಿಗಳಿಗೆ….
ವಂದನೆ ವಂದನೆ ವಂದನೆ…..!!!!!