ಮೇ 20ರವರೆಗೆ ಭದ್ರಾ ನಾಲೆಗೆ ನೀರು: ಮುಖ್ಯಮಂತ್ರಿ ಸೂಚನೆ

ಸಂಸದರು, ಸಚಿವರು, ಶಾಸಕರ ಮನವಿಗೆ ಸ್ಪಂದಿಸಿದ ಸಿಎಂ

ಮಲೇಬೆನ್ನೂರು, ಮೇ 6- ಭದ್ರಾ ಜಲಾಶಯದಿಂದ ಅಚ್ಚುಕಟ್ಟಿನ ಬೇಸಿಗೆ ಹಂಗಾಮಿನ ಬೆಳೆಗಳಿಗೆ ನಾಲೆಯಲ್ಲಿ ಹರಿಸುತ್ತಿರುವ ನೀರನ್ನು ಮೇ 20 ರವರೆಗೆ ಮುಂದುವರೆಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ನವರು ನೀರಾವರಿ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಮಾಜಿ ಶಾಸಕ ಬಿ.ಪಿ. ಹರೀಶ್‌ `ಜನತಾವಾಣಿ’ಗೆ ತಿಳಿಸಿದರು.
ಅಚ್ಚುಕಟ್ಟಿನ ಹರಿಹರ, ದಾವಣಗೆರೆ, ಹೊನ್ನಾಳಿ ಮತ್ತು ಹರಪನಹಳ್ಳಿ ತಾಲ್ಲೂಕುಗಳ ಕೊನೆ ಭಾಗದ ರೈತರಿಗೆ ಇನ್ನೂ 15 ರಿಂದ 20 ದಿನ ನೀರು ಬೇಕಾಗಿರುವುದರಿಂದ ನಾಲೆಯಲ್ಲಿ ನೀರು ಮುಂದುವರೆಸುವಂತೆ ಸಂಸದ ಜಿ.ಎಂ. ಸಿದ್ದೇಶ್ವರ, ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್‌ ಮತ್ತು ನಾನು ಮುಖ್ಯಮಂತ್ರಿಗಳಿಗೆ, ನೀರಾವರಿ ಸಚಿವರಿಗೆ ಹಾಗೂ ಇಲಾಖೆಯ ಕಾರ್ಯದರ್ಶಿ ಗಳಿಗೆ ಈ ಹಿಂದೆಯೇ ಪತ್ರದ ಮೂಲಕ