ಕೊರೊನಾ…ಯಾರಿಟ್ಟರು ಈ ಹೆಸರ

ಕೊರೊನಾ…ಯಾರಿಟ್ಟರು ಈ ಹೆಸರ

ಕೊರೊನಾ ಕೊರೊನಾ ಕೊರೊನಾ
ಯಾರಿಟ್ಟರು ನಿನಗೆ ಈ ಹೆಸರ
ಹಾಗೆಂದರೆ ಕಲಿಯುಗದ ರೋನಾ… ಎಂದರ್ಥ

ಹೆಸರಿಗೆ ನೀನು ಬರೀ ವೈರಸ್
ನಿನ್ನ ಹೆಸರು ಕೇಳಿದರೆ ಎಲ್ಲರೂ ಡುಸ್-ಠುಸ್
ಸಿರಿವಂತರ, ವೀರಾಧಿವೀರರ
ಶೂರಾಧಿಶೂರರ, ಪೈಲ್ವಾನರ .. ಮನೆ ಸೇರಿಸಿದೆ.

ನಾನು…ನನ್ನದು ಎಂದು ಮೆರೆದವರ ಕಣ್ಣು ತೆರೆಸಿದೆ.
ಜೀವ ಒಂದೇ ಮುಖ್ಯ, ಉಳಿದುದೆಲ್ಲ ಮಿಥ್ಯ
ಎಂಬ ಸತ್ಯವ ಸಾರಿ ಸಾರಿ ಹೇಳಿದೆ
ಕ….ರೋನ ಯಾರಿಟ್ಟರು ನಿನಗೆ ಈ ಹೆಸರ
ಜಗಕೆ ಸತ್ಯವ ತಿಳಿಸುವ ನಿನ್ನ ಕೆಲಸ ಮುಗಿದಿದೆ

ಜಗ-ಜಗ ಎನ್ನುತ್ತಿದ್ದ ಜಗತ್ತು ಸೋತಂತೆ ಕಾಣುತಿದೆ
ಜೀವನ ಇಷ್ಟೇ ಎಂಬುದು ಇಡೀ ಜಗಕೆ ತಿಳಿಸಿದೆ
ಯಾರಿಂದಲೂ ಆಗದ ಕೆಲಸವ ನೀನು ಮಾಡಿರುವೆ

ಕ…ರೋನ ಯಾರಿಟ್ಟರು ನಿನಗೆ ಈ ಹೆಸರ
ಸಾಕು ಮಾಡು ನಿನ್ನ ರುದ್ರನರ್ತನವ
ಸಾಕಿನ್ನು ಹೊರಡು ಜನರೇ ಇಲ್ಲದ ಜಗತ್ತಿಗೆ
ಮೊದಲಿನಂತೆ ಜಗ-ಜಗಿಸಲು ಈ ನಾಡು

ಸ್ವಾರ್ಥ, ಸೇಡು, ಅಸೂಯೆ ಎಲ್ಲವ ಬಿಟ್ಟು
ಸ್ನೇಹ, ಪ್ರೀತಿ, ಸಹಬಾಳ್ವೆಯ ಪಣತೊಟ್ಟು
ಸತ್ಯದ ದಾರಿ ತೋರಿದ ಕರೋನಾ….
ಯಾರಿಟ್ಟರು ನಿನಗೆ ಈ ಹೆಸರ.