ಪಾನಪ್ರಿಯರಿಂದ ಕೊರೊನಾ ಇನ್ನೂ ಹೆಚ್ಚಾಗಬಹುದು

ಮಾನ್ಯರೇ,

ಇಡೀ ವಿಶ್ವವನ್ನೇ ಕಾಡುತ್ತಿರುವ ಕೊರೊನಾ ವೈರಸ್‌ನಿಂದ ಕಂಗಾಲಾಗಿ ರುವ ಜನತೆಗೆ ಹೆಂಡದಂಗಡಿ ತೆರೆದು ಇನ್ನೂ ಕೊರೊನಾ ಹೆಚ್ಚಾಗುವಂತೆ ಸರ್ಕಾರ ನಡೆದುಕೊಳ್ಳುವುದು ನಮ್ಮ ದುರಾದೃಷ್ಟಕರ ದುರಂತದ ಸಂಗತಿ.

ಜನತೆಯಲ್ಲಿ ನನ್ನ ಕಳಕಳಿಯ ಮನವಿಯೆಂದರೆ ನಮ್ಮ ಘನ ಸರ್ಕಾರ ಹೆಂಡದಂಗಡಿಗಳನ್ನು ತೆರೆಸಿ, ಮದ್ಯ ಮಾರಾಟ ಮಾಡುತ್ತಿರುವ ಸನ್ನಿವೇಶ ಗಮನಿಸಿದರೆ, ಜನತೆಯ ಜೀವನದ ಬಗ್ಗೆ, ಆರೋಗ್ಯದ ಬಗ್ಗೆ, ಸರ್ಕಾರಕ್ಕೆ ಸ್ವಲ್ವನೂ ಜವಾಬ್ದಾರಿಯಿಲ್ಲ. 

ಸ್ವಾರ್ಥಕ್ಕಾಗಿ ದೇಶವನ್ನೇ ಹಾಳು ಮಾಡುತ್ತಿರುವ ಭ್ರಷ್ಟ ರಾಜಕಾರಣಿಗಳು, ದೇಶ ದ್ರೋಹಿಗಳು ಜನತೆಯ ಉದ್ಧಾರಕ್ಕಾಗಿ ದುಡಿಯುತ್ತಿಲ್ಲ. ನಾವುಗಳು ಇವರ ವಿರುದ್ಧ ಜಾಗೃತರಾಗಿ ಜವಾಬ್ದಾರಿಯಿಂದ ವರ್ತಿಸಬೇಕು.

ಕುಡುಕರು ತಮ್ಮ ಸಂಸಾರಕ್ಕೆ, ಮಕ್ಕಳಿಗೆ, ಹೆಂಡತಿಗೆ ಕೊಡುವ ಹಿಂಸೆಯನ್ನು ಅರಿಯದ ಸರ್ಕಾರ, ಕುಡುಕರನ್ನು ಹೀರೋಗಳನ್ನಾಗಿ ಮಾಡಿ, ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದೆ. 

ಸರ್ಕಾರದ ಈ ನೀತಿಯಿಂದ ಕೊರೊನಾ ಇನ್ನೂ ಹೆಚ್ಚಾಗುತ್ತದೆಯೇ ವಿನಃ ಕಡಿಮೆಯಾಗುವುದಿಲ್ಲ. ಸ್ನೇಹಿತರೇ, ನಮ್ಮ ಸಮಾಜದ ಆರೋಗ್ಯ ಹೇಗೆ ಹಾಳಾಗುತ್ತದೆ ಎಂಬುದನ್ನು ಅರಿತು ಮದ್ಯಪಾನ ವಿರೋಧಿಸಿ, ಜಾಗೃತಿ ಸಂದೇಶಗಳನ್ನು ಭಿತ್ತರಿಸಿ, ಒಗ್ಗಟ್ಟಾಗಿ, ದೃಢ ಸಂಕಲ್ಪ ಮಾಡಿ, ಗಾಂಧಿಯ ಕನಸಿನ ಭಾರತ ನಿರ್ಮಾಣಕ್ಕೆ ಮದ್ಯಪಾನ ನಿಷೇಧ ಮಾಡುವ ಕುರಿತು ಚರ್ಚಿಸಿ, ವಿಚಾರಿಸಿ, ಸರ್ಕಾರದ ಈ ನೀತಿಯನ್ನು ಖಂಡಿಸಿರಿ. ಭಾರತ ಮಾತೆಯ ಉದ್ಧಾರಕ್ಕಾಗಿ ಶ್ರಮಿಸಿರಿ ಜೈಹಿಂದ್‌

– ಜೆಂಬಿಗಿ ಮೃತ್ಯುಂಜಯ, ದಾವಣಗೆರೆ.

Leave a Reply

Your email address will not be published.