ಮುಖ ಮುಚ್ಚಿಕೊಂಡಿರುವ ಸಂಚಾರಿ ಬಸ್

ಮುಖ ಮುಚ್ಚಿಕೊಂಡಿರುವ  ಸಂಚಾರಿ ಬಸ್

ನಾ ಮುಖ ಮುಚ್ಚಿಕೊಂಡಿರುವುದು
ಕೊರೋನ ವೈರಸ್ ಗೆ ಹೆದರಿ ಅಂತೂ ಅಲ್ಲ.
ನನ್ನ ಸೇವಾಧಿಯಲ್ಲಿಯೇ ನಾನಿಷ್ಟು ದಿನ
ಜನರ ಸೇವೆಯಿಂದ ಎಂದೂ ದೂರವಿರಲಿಲ್ಲ
ಸತತ 40ದಿನಗಳಿಂದ ನಾ ಜನರ ಜೀವನದಲ್ಲಿ
ನಾ ಪಾತ್ರಧಾರಿಯಾಗದೇ ಹಾಗೇ ನಿಂತೆನಲ್ಲಾ
ಆ ದುಗುಡದಲ್ಲಿ ಸಂಕೋಚದಿಂದ ಮುಖ
ಮುಚ್ಚಿಕೊಂಡಿರುವೆ.
ಮುಖವಾಡದಿಂದ ಹೊರ ಬರುವ ದಿನಾಂಕ ತಿಳಿಸುವಿರಾ…ಹಾಂ.
ನೀವೂ ನನ್ನಂತೆ ಲಾಕ್ ಡೌನ್ ನಲ್ಲಿ
ಲಾಕ್ ಆಗಿ ಮುಖವಾಡಧಾರಿಗಳಾದಿರಾ…!?
ನನ್ನ ಪ್ರೀತಿಯ ಪ್ರಯಾಣಿಕರೇ?
ನಿಮ್ಮಗಳ ರಸ್ತೆ ಸಂಚಾರಿ ಬಸ್….
– ಕೆ.ಸಿರಾಜ್, ಸಂತೇಬೆನ್ನೂರು.