ಜೋಕೆ

ಜೋಕೆ

ಕೆಲವರು ನಮ್ಮೆದುರಿಗೆ ನಮ್ಮಂತೆಯೇ ನಟಿಸಿ
ಪರದೆಯ ಹಿಂದೆ ಅವರಾಡಿದ್ದೇ ಆಟ ಆಡುವರು
ನುಡಿದ ನಾಲಗೆಯ ಮೇಲಿನ ಮಾತುಗಳು
ತಿಪ್ಪೆಯ ಮೇಲೆ ಕೂತು ಹಾರುವ ನೊಣದಂತೆ
ಕೊಟ್ಟ ಮಾತಿಗೆ ಬೆಲೆಯಿಲ್ಲ ಪಾಪದ ಪರಿಜ್ಞಾನವೇ ಇಲ್ಲ
ಹುಸಿಯ ನುಡಿಯಬೇಡೆನ್ನುವ ಶರಣರ ವಚನ ನೆನಪೇ ಇಲ್ಲ
ಕಾಲಕ್ಕೆ ತಕ್ಕಂತೆ ಬದಲಾಗುವ ಊಸರವಳ್ಳಿಯಂತಹ ಇವರು
ಯಾರನ್ನ ಯಾವಾಗ ಬೇಕಾದರೂ ಯಾಮಾರಿಸುವ ಚಾತುರ್ಯದವರು
ಅವರವರ ಮೂಗಿನ ನೇರಕ್ಕೆ ತಕ್ಕಂತೆ ನುಡಿವವರು
ಮನ ಬಂದಂತೆ ಬದಲಾಗುವರು ತಾವು ಒಳ್ಳೆಯವರಾಗಲು
ಎಷ್ಟಂತ ನಾಟಕ ಮಾಡುವಿರಿ ಹಚ್ಚಿದ ಬಣ್ಣವೇ ಹೋಗುವುದೊಮ್ಮೆ
ಇನ್ನ ಬಣ್ಣ ಹಚ್ಚದ ನಿಮ್ಮ ಮುಖ ಬಯಲಾಗುವುದೊಮ್ಮೆ ಜೋಕೆ

                                   – ಅಣಬೇರು ತಾರೇಶ್.ಕೆ.ಪಿ., ಪ್ರಯೋಗಶಾಲಾ ತಂತ್ರಜ್ಞರು, ಜೆ.ಜೆ.ಎಮ್.ಮೆಡಿಕಲ್ ಕಾಲೇಜ್ ದಾವಣಗೆರೆ.