ವೇಷಭೂಷಣ ಧರಿಸಿ ಕೊರೊನಾ ಜಾಗೃತಿ

ವೇಷಭೂಷಣ ಧರಿಸಿ ಕೊರೊನಾ  ಜಾಗೃತಿ

ಹರಿಹರ, ಏ.7- ನಗರದಲ್ಲಿ ಮಾರಕವಾದ ಕೊರೊನಾ ವೈರಸ್ ರೋಗವು ಹೆಚ್ಚಿನ ಪ್ರಮಾಣದಲ್ಲಿ ಹರಡದಂತೆ ತಡೆಗಟ್ಟಲು ಪೊಲೀಸ್ ಸಿಬ್ಬಂದಿ ಟಿ.ಡಿ. ಶ್ರೀನಿವಾಸ್, ಪತ್ರಕರ್ತ ಜಿ.ಕೆ. ಪಂಚಾಕ್ಷರಿ ಹಾಗೂ ಕಲಾವಿದ ನಾಗರಾಜ್ ಕಾಳಿಂಗ ಇವರು ಯಮಧರ್ಮ ಮತ್ತು ಚಿತ್ರಗುಪ್ತ ವೇಷಭೂಷಣ ಧರಿಸಿ ಸಾರ್ವಜನಿಕರಿಗೆ ಅರಿವು ಮೂಡಿಸಿದರು.

ಈ ಸಂದರ್ಭದಲ್ಲಿ ದಾವಣಗೆರೆ ಡಿವೈಎಸ್ಪಿ ಮಂಜುನಾಥ್ ಗಂಗಲ್, ಸಿಪಿಐ ಎಸ್. ಶಿವಪ್ರಸಾದ್, ಪಿಎಸ್ಐ ಎಸ್. ಶೈಲಾಶ್ರೀ, ಗ್ರಾಮಾಂತರ ಪಿಎಸ್ಐ ಡಿ. ರವಿಕುಮಾರ್ ಹಾಗೂ ಪೊಲೀಸ್ ಸಿಬ್ಬಂದಿಗಳು ಹಾಜರಿದ್ದರು.