ಹರಿಹರದಲ್ಲಿ ಶ್ರೀನಿವಾಸ್ ಸ್ನೇಹ ಬಳಗದಿಂದ ದಿನಸಿ ಕಿಟ್ ವಿತರಣೆ

ಹರಿಹರದಲ್ಲಿ ಶ್ರೀನಿವಾಸ್ ಸ್ನೇಹ ಬಳಗದಿಂದ ದಿನಸಿ ಕಿಟ್ ವಿತರಣೆ

ಹರಿಹರ, ಏ. 16- ಕೊರೊನಾ ವೈರಸ್ ಕಾರಣ ಆಗಿರುವ ಲಾಕ್ ಡೌನ್  ಪರಿಣಾಮ, ಅನೇಕ ಆಟೋ ಚಾಲಕರಿಗೆ ಮತ್ತು ಮಾಲೀಕರಿಗೆ ಸಂಕಷ್ಟದ ಸ್ಥಿತಿ ಬಂದಿರುವುದರಿಂದ ಎನ್. ಹೆಚ್. ಶ್ರೀನಿವಾಸ್ ಸ್ನೇಹ ಬಳಗದಿಂದ 237 ಜನ ಆಟೋ ಮಾಲೀಕರು ಮತ್ತು ಆಟೋ ಚಾಲಕರಿಗೆ ಉಚಿತವಾಗಿ ದಿನಸಿ ಪದಾರ್ಥಗಳ ಕಿಟ್ ಗಳನ್ನು ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ಅವರು ನೇತೃತ್ವದಲ್ಲಿ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಉದ್ಯಮಿ ಎನ್. ಹೆಚ್ ಶ್ರೀನಿವಾಸ್, ಸ್ನೇಹ ಬಳಗದ ಸಕ್ರಿ ಐಟಿಐ ಕಾಲೇಜಿನ  ಉಪನ್ಯಾಸಕರಾದ ಕರಿಬಸಪ್ಪ, ಬಿರ್ಲಾ ಪಾಲಿಪೈಬರ್ಸ್ ಕಾಲೇಜಿನ ಉಪನ್ಯಾಸಕರಾದ ಶಿವಕುಮಾರ್, ಸತ್ಯನಾರಾಯಣ, ವೆಂಕಟೇಶ ಶೆಟ್ಟಿ, ಸಚಿನ್ ಸಿದ್ದಲಿಂಗ ಸ್ವಾಮಿ, ನಾಗರಾಜ್  ಮತ್ತಿತರರು ಉಪಸ್ಥಿತರಿದ್ದರು.