ಚಾಮರಾಜಪೇಟೆ ಗೆಳೆಯರ ಬಳಗದಿಂದ ತಿಂಡಿ ವಿತರಣೆ

ಚಾಮರಾಜಪೇಟೆ ಗೆಳೆಯರ ಬಳಗದಿಂದ ತಿಂಡಿ ವಿತರಣೆ

ದಾವಣಗೆರೆ, ಏ.7- ಮಹಾವೀರ ಜಯಂತಿ ಪ್ರಯುಕ್ತ ನಗರದ ಎಂಸಿಸಿ ‘ಎ’ ಬ್ಲಾಕ್ ನಲ್ಲಿರುವ ಸ್ಪೂರ್ತಿ ಸೇವಾ ಟ್ರಸ್ಟ್ ಇವರ ಆಶ್ರಯದಲ್ಲಿ ಚಾಮರಾಜಪೇಟೆ ಗೆಳೆಯರ ಬಳಗದ ವತಿಯಿಂದ ಸೋಮವಾರ ಪೌರ ಕಾರ್ಮಿಕರಿಗೆ, ಬಡವರಿಗೆ ಹಾಗೂ ಆಸ್ಪತ್ರೆಗಳಲ್ಲಿ ಉಚಿತವಾಗಿ ಸುಮಾರು 2 ಸಾವಿರಕ್ಕೂ ಹೆಚ್ಚು ತಿಂಡಿ ಪ್ಯಾಕೆಟ್ ಗಳನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ದೀಪಕ್ ಜೈನ್, ಗೌತಮ್ ಜೈನ್, ಜಯಂತಿಲಾಲ್ ಜೈನ್, ಸಂದೀಪ್ ಜೈನ್, ಪ್ರಕಾಶ್, ಚಂದ್ರಕಾಂತ್, ತೇಜಸ್, ಕುಮಾರ್ ಪಾಲ್ ಜೈನ್, ಮಲ್ಲಿಕಾರ್ಜುನ್, ಗಣೇಶ್ ಪ್ರಜಾಪತ್, ಮುಕೇಶ್ ಪ್ರಜಾಪತಿ ಸೇರಿದಂತೆ ಇತರರು ಇದ್ದರು.