ಸಾಗರ…

ನಮ್ಮಯ ಮನೆ
ಪ್ರೀತಿಯ ಅರಮನೆ.
ನಮ್ಮಯ ಗೃಹ
ಜೀವಗಳ ದೇಹ.
ನಮ್ಮಯ ಕುಟುಂಬ
ಭಾವಗಳ ಪ್ರತಿಬಿಂಬ.
ನಮ್ಮಯ ನಿವಾಸ
ಕರುಣೆಯ ಕೈಲಾಸ.
ನಮ್ಮಯ ಆಲಯ
ಹೆತ್ತವರಿವರ ದೇವಾಲಯ.
ನಮ್ಮಯ ಕುಟೀರ
ಮಮತೆಯ ಹಂದರ.
ನಮ್ಮಯ ಬೀಡು
ಒಗ್ಗಟ್ಟಿನ ಜೇನುಗೂಡು.
ನಮ್ಮಯ ಸಂಸಾರ
ಆನಂದದ ಸಾಗರ.


ಶಿವಮೂರ್ತಿ.ಹೆಚ್. ಕನ್ನಡ ಶಿಕ್ಷಕರು
ಶ್ರೀ ತರಳಬಾಳು ಜಗದ್ಗುರು ರೆಸಿಡೆನ್ಸಿಯಲ್
ಸ್ಕೂಲ್, ಅನುಭವಮಂಟಪ, ದಾವಣಗೆರೆ.
shivamurthyh2012@gmail.com