ಸುದ್ದಿ ಸಂಗ್ರಹ

Home ಸುದ್ದಿ ಸಂಗ್ರಹ

ಸ್ವರಾಜ್ಯ, ಸ್ವಾತಂತ್ರ್ಯ ದೊರೆತಿದ್ದು ಕಾರ್ಮಿಕರಿಂದಲೇ

ಕಾಂಗ್ರೆಸ್ ಮೊದಲ ಬಾರಿಗೆ ಸ್ವರಾಜ್ಯದ ಮಾತನಾಡಿದ್ದೂ ಕಾರ್ಮಿಕರ ಹೋರಾಟದ ಫಲ ಎಂದು  ಎ.ಐ.ಟಿ.ಯು.ಸಿ. ರಾಜ್ಯ ಪ್ರಧಾನ ಕಾರ್ಯದರ್ಶಿ ಡಿ.ಎ. ವಿಜಯಭಾಸ್ಕರ್ ಹೇಳಿದ್ದಾರೆ.

ಮಾಧ್ಯಮಗಳ ದೃಶ್ಯ ವೈಭವೀಕರಣ ಆರೋಗ್ಯಕರವಲ್ಲ

ಸರ್ಕಾರದ ಮೂರು ಅಂಗಗಳಾದ ಶಾಸಕಾಂಗ,  ಕಾರ್ಯಾಂಗ,  ನ್ಯಾಯಾಂಗ ಇದರ ಜೊತೆಯಲ್ಲಿ ಪತ್ರಿಕಾ ಮಾಧ್ಯಮ ನಾಲ್ಕನೇ ಅಂಗವಾಗಿಯೂ, ದೃಶ್ಯ ಮಾಧ್ಯಮ ಐದನೇ  ಅಂಗವಾಗಿಯೂ ಕೆಲಸ ನಿರ್ವಹಿಸುತ್ತಿವೆ ಎಂದು ಹಿರಿಯ ನ್ಯಾಯವಾದಿ ರೇವಣ್ಣ ಬಳ್ಳಾರಿ ಹೇಳಿದರು.

ಬಿಜೆಪಿ ಪರ ಸಿಬಿಐ ಕೆಲಸ ಮಾಡುತ್ತಿದೆ : ಡಿಕೆಶಿ

ಬಿಜೆಪಿ ಪರವಾಗಿ ಸಿಬಿಐ ಕಾರ್ಯ ನಿರ್ವಹಿಸುತ್ತಿದೆ ಎಂದು ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ. ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆಯಷ್ಟೇ ಶಿವಕುಮಾರ್‌ಗೆ ಸಿಬಿಐ ನೋಟಿಸ್ ಕಳಿಸಿತ್ತು.

ದೂಡಾ ಅಧ್ಯಕ್ಷರ ಆರೋಪ ಸುಳ್ಳು

ದೂಡಾದಲ್ಲಿ ಕಾಂಗ್ರೆಸ್ ಆಡಳಿತವಾಧಿಯಲ್ಲಿ ಸರ್ಕಾರಿ ಜಾಗಗಳ ಒತ್ತುವರಿಯಾಗಿಲ್ಲ. ಪ್ರಚಾರಕ್ಕಾಗಿ ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕಮಾರ್ ಈ ರೀತಿ ಹೇಳಿಕೆ ನೀಡಿದ್ದಾರೆ ಎಂದು ಡಿ.ಬಸವರಾಜ್ ಹೇಳಿದ್ದಾರೆ.

ಕಾಲೇಜು ಟೆಸ್ಟ್‌ನಲ್ಲಿ ಕುಸಿದ ಕೊರೊನಾ !

ಜಿಲ್ಲೆಯಲ್ಲಿ ಕೊರೊನಾ ಸೋಂಕು ಗಣನೀಯವಾಗಿ ಕ್ಷೀಣಿಸಿದ್ದು, ಕಾಲೇಜು ಪ್ರವೇಶದ ಹಿನ್ನೆಲೆಯಲ್ಲಿ ನಡೆಸಲಾದ ಕೊರೊನಾ ಪರೀಕ್ಷೆಗಳಲ್ಲಿ 7,252 ಟೆಸ್ಟ್‌ಗಳಲ್ಲಿ ಕೇವಲ 12 ಜನರಿಗೆ ಪಾಸಿಟಿವ್ ಬಂದಿದೆ. ಇದರಿಂದಾಗಿ ಕಾಲೇಜು ಶಿಕ್ಷಣಕ್ಕೆ ಶುಭಾರಂಭ ದೊರಕಿದಂತಾಗಿದೆ.

ವಿದ್ಯಾರ್ಥಿಗಳ ಸಮಸ್ಯೆ ಪರಿಹರಿಸಲು ಸರ್ಕಾರಕ್ಕೆ ಎಐಡಿಎಸ್‌ಓ ಆಗ್ರಹ

ರಾಜ್ಯ ಸರ್ಕಾರ ಕಾಲೇಜುಗಳನ್ನು ಪ್ರಾರಂಭಿಸುವಂತೆ ಆದೇಶಿದ್ದು, ಹಲವು ಜಿಲ್ಲೆಗಳಲ್ಲಿ ಹಾಸ್ಟೆಲ್ ವ್ಯವಸ್ಥೆ, ಊಟ ಹಾಗೂ ವಸತಿ ವ್ಯವಸ್ಥೆ ದೊರಕದೆ ಪರದಾಡುತ್ತಿದ್ದಾರೆ. ಅವರ ಸಮಸ್ಯೆಗಳನ್ನು ಕೂಡಲೇ ಸರ್ಕಾರ ಪರಿಹರಿಸಬೇಕೆಂದು ಎಐಡಿಎಸ್‌ಓ ಆಗ್ರಹಿಸಿದೆ.

ಇಂದು ಜಿಲ್ಲಾ ವನಿತಾ ಸಾಹಿತ್ಯ ವೇದಿಕೆ ವಾರ್ಷಿಕೋತ್ಸವ

ದಾವಣಗೆರೆ ಜಿಲ್ಲಾ ವನಿತಾ ಸಾಹಿತ್ಯ ವೇದಿಕೆಯು ತನ್ನ 26ನೇ ವಾರ್ಷಿಕೋತ್ಸವ ಮತ್ತು 65ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವು ಅಂತರ್ಜಾಲದ ಮೂಲಕ ಇಂದು ನಡೆಯಲಿದೆ.

ವಾಸ್ಕೋ ರೈಲು ಗಾಡಿ ಮಾರ್ಗ ವಿಸ್ತರಿಸಲು ಮನವಿ

ವಾಸ್ಕೋ-ಯಶವಂತಪುರ ಎಕ್ಸ್‌ಪ್ರೆಸ್ ರೈಲು ಗಾಡಿಯನ್ನು ಪ್ರಸ್ತುತ ಯಶವಂತ ಪುರದಿಂದ ಬೆಂಗಳೂರುವರೆಗೆ ವಿಸ್ತರಿಸಿ, ವಾರಪೂರ್ತಿ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ಆಗಿ ಪರಿವರ್ತಿಸಿ ಓಡಿಸುವುದರಿಂದ ದಾವಣಗೆರೆ ಹಾಗೂ ಹರಿಹರದ ರೈಲು ಪ್ರಯಾಣಿಕರಿಗೆ ಅನುಕೂಲವಾಗುತ್ತದೆ.

ವಾಸೋಪಯೋಗದ ಬಳಿ ಮದ್ಯದಂಗಡಿಗೆ ಅನುಮತಿ ನೀಡದಿರಲಿ

ವಾಸೋಪಯೋಗದ ಬಡಾವಣೆ ಸಮೀಪವೇ ರಿಂಗ್ ರಸ್ತೆಯಲ್ಲಿನ ವಾಣಿಜ್ಯ ಮಳಿಗೆಯಲ್ಲಿ ಎಂಆರ್ ಪಿ ಲಿಕ್ಕರ್ ಶಾಪ್ ತೆರೆಯಲು ಅನುಮತಿ ನೀಡಬಾರದೆಂದು ಒತ್ತಾಯಿಸಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರಿಗೆ ಇಂದು ಮನವಿ ಸಲ್ಲಿಸಲಾಯಿತು.

ಮಕ್ಕಳ ಪ್ರತಿಭೆಯ ‘ಚಿಗುರಿಗೆ’ ಆಕರ್ಷಕ ವೇದಿಕೆ ಕೊಡಿ : ಶಾಸಕ ಎಸ್.ಎ. ರವೀಂದ್ರನಾಥ್‌ ಕರೆ

ಮಕ್ಕಳ ಪ್ರತಿಭೆಗಳನ್ನು ಗುರುತಿಸಲು ರೂಪಿಸಲಾಗಿರುವ 'ಚಿಗುರು' ರೀತಿಯ ಕಾರ್ಯಕ್ರಮಗಳು ಕೊರೊನಾ ನಂತರದ ದಿನಗಳಲ್ಲಿ ಆಕರ್ಷಕ ವೇದಿಕೆ ಮೇಲೆ ವಿಜೃಂಭಣೆಯಿಂದ ನಡೆಯುವಂತಾಗಲಿ ಎಂದು ಶಾಸಕ ಎಸ್.ಎ. ರವೀಂದ್ರನಾಥ್ ಹೇಳಿದ್ದಾರೆ.

ಮಣ್ಣಿನಿಂದ ಅನ್ನ ತೆಗೆಯುವ ಜಾದೂಗಾರ ಕೃಷಿಕ

ಕೃಷಿಕರು ಅದ್ಭುತ ಸಾಧಕರು. ಅವರು ಪ್ರಕೃತಿ ಮಾತೆಯ ಜೊತೆಗೆ ಮಹಾ ಅನುಸಂಧಾನ ಮಾಡಿಕೊಂಡು ಮಣ್ಣಿನಿಂದ ಅನ್ನವನ್ನು ಹೊರ ತೆಗೆಯುವಂತಹ ಜಾದೂಗಾರರು ಎಂಬ ಮಾತುಗಳನ್ನು  ಡಾ. ಟಿ.ಎನ್. ದೇವರಾಜ್ ಆಡಿದರು.

ಮಲೇಬೆನ್ನೂರಿನಲ್ಲಿ ತಂಬಾಕು ಮಾರಾಟ ಮಳಿಗೆ ಮೇಲೆ ದಾಳಿ

ಪಟ್ಟಣದಲ್ಲಿ ತಂಬಾಕು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ದಿಢೀರ್ ದಾಳಿ ಮಾಡಿದ ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ನೇತೃತ್ವದ ತಂಡ ಪ್ರಕರಣ ದಾಖಲು ಮಾಡಿ ದಂಡ ವಿಧಿಸಿದರು.

ಕೃಷಿಯಲ್ಲಿ ಯುವಕರನ್ನು ಆಕರ್ಷಿಸುವ ಯೋಜನೆಗಳು ಬರಲಿ

ಕೃಷಿ ಮಣ್ಣನ್ನು ಒಳಗೊಂಡ ಒಂದು ಪ್ರಕ್ರಿಯೆ. ರೈತ ಮಣ್ಣಿನ ಜೊತೆ ನಿರಂತರ ಸಂಪರ್ಕ ಹೊಂದಿದಾಗ ಮಾತ್ರ ಕೃಷಿ ಕೆಲಸ ಸುಗಮವಾಗಿ ಸಾಗಲು ಸಾಧ್ಯ  ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಂಚಾಲಕ ಕೆ. ಸಿರಾಜ್ ಅಹಮದ್ ಹೇಳಿದರು.

57 ಕೆರೆ ಯೋಜನೆ ತ್ವರಿತ ಕಾಮಗಾರಿಗೆ ಒತ್ತಾಯ

ಜಗಳೂರು ವಿಧಾನಸಭಾ ಕ್ಷೇತ್ರದ 57 ಕೆರೆ ಗಳ ದೀಟೂರು ಏತ ನೀರಾವರಿ ಯೋಜನೆಗೆ ತ್ವರಿತವಾಗಿ ನಡೆಯಬೇಕು. ಸರ್ಕಾರ ಶೀಘ್ರವೇ ಹಣ ಬಿಡುಗಡೆ ಮಾಡಬೇಕು ಎಂದು ಭದ್ರಾ ಮೇಲ್ದಂಡೆ ಯೋಜನೆ ತಜ್ಞರ ಸಮಿತಿ ಸದಸ್ಯ ಕೆ.ಬಿ. ಕಲ್ಲೇರುದ್ರೇಶ್ ಒತ್ತಾಯಿಸಿದ್ದಾರೆ.

ದತ್ತ ಪೀಠ ಹಿಂದೂಗಳಿಗೆ ಒಪ್ಪಿಸದಿದ್ದರೆ ಉಗ್ರ ಹೋರಾಟ

ನಾಳೆ ದಿನಾಂಕ 22 ರಿಂದ ಇದೇ ದಿನಾಂಕ 26ರವರೆಗೆ ರಾಜ್ಯಾದ್ಯಂತ ದತ್ತ ಮಾಲೆ ಅಭಿಯಾನ ನಡೆಯಲಿರುವುದಾಗಿ ಶ್ರೀರಾಮ ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಅವರು ಇಂದಿಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಮರಾಠ ಪ್ರಾಧಿಕಾರ ರಚನೆಗೆ ಅಪಸ್ವರ ಬೇಡ

ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಯನ್ನು ವಿರೋಧಿಸಿ ಕರ್ನಾಟಕ ಬಂದ್ ಕರೆ ನೀಡಿರುವುದನ್ನು ಕೈ ಬಿಟ್ಟು, ಪ್ರಾಧಿಕಾರಕ್ಕೆ ಬೆಂಬಲ ನೀಡುವಂತೆ ಕ್ಷತ್ರಿಯ ಮರಾಠ ವಿದ್ಯಾವರ್ಧಕ ಸಂಘದ ಗೌರವಾಧ್ಯಕ್ಷ ಯಶವಂತರಾವ್ ಜಾಧವ್ ಮನವಿ ಮಾಡಿದ್ದಾರೆ.

ಮೌಲ್ಯಗಳ ಪರಿಪಾಲನೆಯಿಲ್ಲದ ಜೀವನ ವ್ಯರ್ಥ

ರಂಭಾಪುರಿ ಪೀಠ (ಬಾಳೆಹೊನ್ನೂರು) : ಸಂತಸ ಮತ್ತು ಶಾಂತಿಯ ಬದುಕಿಗೆ ಧರ್ಮವೇ ಮೂಲ. ಸುಖ - ಸಂತೋಷ ನಮಗಾಗಿ ಹೇಗೆ ಬಯಸುತ್ತೇವೆಯೋ ಹಾಗೆ ಇತರರಿಗಾಗಿ ಬಯಸುವುದು ನಿಜವಾದ ಧರ್ಮ. ಮೌಲ್ಯಗಳ ಪರಿಪಾಲನೆಯಿಲ್ಲದ ಮನುಷ್ಯನ ಜೀವನ ವ್ಯರ್ಥವಾಗುತ್ತದೆ

ಡಿ.5ರ ಕರ್ನಾಟಕ ಬಂದ್‍ಗೆ ಅಖಿಲ ಭಾರತ ಹಿಂದೂ ಮಹಾಸಭಾ ಬೆಂಬಲ

ಮತ ಬ್ಯಾಂಕ್ ರಾಜಕಾರಣಕ್ಕಾಗಿ ಮರಾಠ ಪ್ರಾಧಿಕಾರ, ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ರಚನೆ ಮಾಡಿರುವ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಡಿಸೆಂಬರ್ 5ರಂದು ಕನ್ನಡಪರ ಸಂಘಟನೆಗಳು ನೀಡಿರುವ ಕರ್ನಾಟಕ ಬಂದ್‍ಗೆ ಅಖಿಲ ಭಾರತ ಹಿಂದೂ ಮಹಾಸಭಾ ಬೆಂಬಲ ಸೂಚಿಸಿದೆ.

ವಿಜಯನಗರಕ್ಕೆ ಕೂಡ್ಲಿಗಿ ಸೇರಿಸಿ

ಕೂಡ್ಲಿಗಿ ತಾಲ್ಲೂಕನ್ನು ನೂತನವಾಗಿ ರಚನೆ ಯಾಗುವ ವಿಜಯನಗರ ಜಿಲ್ಲೆಗೆ ಸೇರ್ಪಡೆ ಮಾಡಲು ತಾಲ್ಲೂಕಿನ ಜನಪ್ರತಿನಿಧಿ ಗಳು, ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್, ಸಿಎಂ ಯಡಿಯೂರಪ್ಪ ಅವರು ಇಚ್ಛಾ ಶಕ್ತಿ ತೋರಿಸುವ ಮೂಲಕ ಈ ತಾಲ್ಲೂಕಿನ ಜನತೆಗೆ ನ್ಯಾಯ ಒದಗಿಸಬೇಕು.

ರೈತರು ಕಡೆಯ ದಿನಾಂಕದೊಳಗೆ ಬೆಳೆ ವಿಮೆ ಮಾಡಿಸಲು ಸೂಚನೆ

2020-21ನೇ ಸಾಲಿನ ಹಿಂಗಾರು ಮತ್ತು ಬೇಸಿಗೆ ಹಂಗಾಮಿನ ಬೆಳೆಗಳಿಗೆ ರೈತರು ಬೆಳೆ ವಿಮೆ ಮಾಡಿಸುವ ಸಂಬಂಧ ಹೆಚ್ಚಿನ ಪ್ರಚಾರ ನೀಡಿ, ವಿಮೆ ಮಾಡಿಸಬೇಕೆಂದು ಜಿಲ್ಲಾಧಿ ಕಾರಿಗಳು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ವೀರಶೈವ ಸಭಾದ ಮಹಿಳಾ ಘಟಕ ಸಂಭ್ರಮ

ವೀರಶೈವ-ಲಿಂಗಾಯತ ಅಭಿವದ್ಧಿ ನಿಗಮ ರಚಿಸಿರುವ ರಾಜ್ಯ ಸರ್ಕಾರದ ಕ್ರಮ ಸ್ವಾಗತಿಸಿ, ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಮಹಿಳಾ ಘಟಕದ ವತಿಯಿಂದ ನಗರದಲ್ಲಿ ಇಂದು ಸಂಭ್ರಮಾಚರಿಸಲಾಯಿತು.

ಹರಿಹರ ಠಾಣೆ ಪಿಎಸ್ಐ ಆಗಿ ಸುನಿಲ್ ಬಸವರಾಜ್ ತೇಲಿ

ಹರಿಹರ ನಗರ ಠಾಣೆಯ ಸಬ್ ಇನ್  ಸ್ಪೆಕ್ಟರ್ ಶ್ರೀಮತಿ ಶೈಲಶ್ರೀ ಅವರ ವರ್ಗಾವಣೆಯ ಬಳಿಕ ಖಾಲಿ ಉಳಿದಿದ್ದ ಆರಕ್ಷಕ ಉಪನಿರೀಕ್ಷಕ ಹುದ್ದೆಗೆ ಪ್ರಾಯೋಗಿಕ ತರಬೇತಿಯಲ್ಲಿದ್ದ ಸುನಿಲ್ ಬಸವರಾಜ್ ತೇಲಿ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದ್ದು, ಅವರು ಇಂದು ಅಧಿಕಾರ ಸ್ವೀಕರಿಸಿದರು

ಕಟಾವು ಯಂತ್ರಕ್ಕೆ ಅಧಿಕ ಹಣ : ಕ್ರಮಕ್ಕೆ ಆಗ್ರಹ

ಹೊನ್ನಾಳಿ : ಭತ್ತದ ಕಟಾವು ಕಾರ್ಯ ಜಿಲ್ಲೆಯಾದ್ಯಂತ ಆರಂಭವಾಗಿದ್ದು, ಭತ್ತ ಕಟಾವು ಯಂತ್ರಗಳ ಮಾಲೀಕರು ರೈತರಿಂದ ಅಧಿಕ ಹಣ ಪಡೆದುಕೊಳ್ಳುತ್ತಿದ್ದಾರೆ ಎಂದು ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಆರೋಪಿಸಿದ್ದಾರೆ.

ಎಸ್ಟಿ-ಎಸ್ಸಿ ಮೀಸಲು ಹೆಚ್ಚಳ : ಸಚಿವ ಸಂಪುಟದ ಉಪಸಮಿತಿ ರಚನೆ

ಮಲೇಬೆನ್ನೂರು : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲು ಪ್ರಮಾಣ ಹೆಚ್ಚಳ ಮಾಡುವ ಬಗ್ಗೆ ಚರ್ಚಿಸಿ ವರದಿ ನೀಡಲು ಸಚಿವ ಸಂಪುಟದ ಉಪ ಸಮಿತಿ ರಚನೆ ಮಾಡಲು ನಿರ್ಧರಿಸಿರುವ ಸರ್ಕಾರದ ಕ್ರಮವನ್ನು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಸ್ವಾಗತಿಸಿದ್ದಾರೆ.