ರಾಶಿ ಭವಿಷ್ಯ

Home ರಾಶಿ ಭವಿಷ್ಯ

ದಿನಾಂಕ : 07.03.2021 ರಿಂದ 13.03.2021

ಜಯತೀರ್ಥಾಚಾರ್ ವಡೇರ್, ದಾವಣಗೆರೆ. 

ಮೇಷ (ಅಶ್ವಿನಿ, ಭರಣಿ, ಕೃತ್ತಿಕಾ)
(ಚೂ.ಚೇ.ಚೋ.ಲ.ಲಿ.ಉ.ಲೇ.ಲೊ.ಅ.)

ನೀವು ತೆಗೆದುಕೊಳ್ಳುತ್ತಿರುವ ನಿರ್ಧಾರ ಸರಿಯಾಗಿಯೇ ಇರುವುದರಿಂದ ಯಾವುದೇ ಕಾರಣಕ್ಕೂ ಬದಲಾಯಿಸಬೇಡಿ. ವ್ಯವಹಾರದಲ್ಲಿ ಗಣನೀಯವಾಗಿ ಏರಿಕೆಯಾಗಲಿದೆ. ಮನೆಯಲ್ಲಿ ಧಾರ್ಮಿಕ ಕಾರ್ಯಗಳು ನಡೆಯಲಿವೆ. ಕೌಟುಂಬಿಕ ಸಮಸ್ಯೆಗಳು ಬಗೆಹರಿಯಲಿವೆ. ಮನೆಯಲ್ಲಿ ಸುಖ, ಸಂತೋಷ ಕಾಣುವಿರಿ. ಕುಲದೇವತಾ ದರ್ಶನ ಮಾಡಿ, ಕೆಲಸ ಕಾರ್ಯಗಳ ನೆಪದಲ್ಲಿ ಆರೋಗ್ಯವನ್ನು ಅಲಕ್ಷಿಸಬೇಡಿ. ಆದಾಯದ ಮೂಲದಲ್ಲಿ  ಸಾಕಷ್ಟು ಹೆಚ್ಚಳ ಕಂಡುಬರಲಿದೆ. ಆಸ್ತಿ ಖರೀದಿ ವಿಷಯವನ್ನು ಮತ್ತೊಮ್ಮೆ ಪರಿಶೀಲಿಸುವುದು ಉತ್ತಮ. ಅವಿವಾಹಿತರಿಗೆ ಕಂಕಣಭಾಗ್ಯ. ಮಂಗಳ-ಬುಧ -ಗುರು ಶುಭ ದಿನಗಳು.


ವೃಷಭ (ಕೃತ್ತಿಕಾ, 2,3,4, ರೋಹಿಣಿ, ಮೃಗ 1,2)
(ಇ.ಉ.ಎ.ಒ.ವ.ವಿ.ವು.ವೆ.ವೋ)

ಸಾಧ್ಯವಾದಷ್ಟು ನಿಮ್ಮ ಪಾಡಿಗೆ ನೀವಿರುವುದು ಮೇಲು. ಸಂಬಂಧ ಪಡದ ವಿಚಾರಗಳಲ್ಲಿ ಪ್ರವೇಶಿಸಿದ್ದೇ ಆದರೆ ನಷ್ಟದೊಂದಿಗೆ ಅಪಮಾನವನ್ನೂ ಅನುಭವಿಸ ಬೇಕಾದೀತು. ಈ ಹಿಂದೆ ಆರಂಭಿಸಿದ್ದ ಹೊಸ ಯೋಜನೆಯು ಖಂಡಿತಾ ನಿಮ್ಮ ಕೈಹಿಡಿಯಲಿದೆ. ಬಂಧುಗಳೊಂದಿಗೆ ನಿಷ್ಠೂರದ ಮಾತುಗಳನ್ನಾಡುವುದರಿಂದ, ಸಂಬಂಧಕ್ಕೆ ಧಕ್ಕೆ ಬರಬಹುದು. ಖಾಸಗಿ ಕಂಪನಿ ನೌಕರರು ಸಹೋದ್ಯೋಗಿಗಳೊಂದಿಗೆ ಸಹಕರಿಸಿ, ಇಲ್ಲವಾದಲ್ಲಿ ಅವರಿಂದಲೇ ತೊಂದರೆ. ಸ್ನೇಹಿತರ ಸಲಹೆಯಂತೆ ನಡೆದು ಕೊಂಡಲ್ಲಿ, ವ್ಯವಹಾರದಲ್ಲಿ ಬಂದಿರುವ, ಗುರುಗಳ ಅನುಗ್ರಹ ಪಡೆಯಿರಿ. ಸೋಮ-ಶುಕ್ರ-ಶನಿ ಶುಭದಿನಗಳು.


ಮಿಥುನ (3,4, ಆರಿದ್ರಾ, ಪುನರ್ವಸು 1,2,3)
(ಕ.ಕಿ.ಕು.ಘ, ಔ, ಚ.ಕೆ.ಕೋ.ಹ.)

ಕೆಲವು ವಿಷಯಗಳು ನಿಮಗೆ ಗೊತ್ತಿದ್ದರೂ ಗೊತ್ತಿಲ್ಲದಂತಿರುವುದು ಒಳ್ಳೆಯದು. ಆಸ್ತಿ ಲಪಟಾಯಿಸಲು ಹಲವರು ಹಲವು ಪಿತೂರಿ ನಡೆಸಬಹುದು. ಅಂತಹವರ ಬಗ್ಗೆ ಎಚ್ಚರದಿಂದಿರಿ. ಮಕ್ಕಳ ವಿದ್ಯಾಭ್ಯಾಸದಲ್ಲಿದ್ದ ಗೊಂದಲಗಳು ಬಗೆಹರಿದು, ಅವರ ಉನ್ನತಾಧ್ಯಯನಕ್ಕೆ ಅನುಕೂಲವಾಗಲಿದೆ. ನಿಮ್ಮ ಸಲಹೆಯಿಂದ ಮಾತ್ರ ಸೋದರನ ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರ. ಗ್ರಾಮಲೆಕ್ಕಿ ಗರು ತಮ್ಮ ಕರ್ತವ್ಯವನ್ನು ಬಹಳ ಎಚ್ಚರದಿಂದ ನಿರ್ವಹಿಸಿ, ಆದಾಯದಲ್ಲಿ ತುಸು ಏರುಪೇರಾಗುವುದರಿಂದ ಮಿತಿ ಮೀರುತ್ತಿರುವ ಖರ್ಚು-ವೆಚ್ಚಗಳಿಗೊಂದು ಕಡಿವಾಣ ವಿರಲಿ, ತೀರ್ಥಯಾತ್ರೆ ಮಾಡುವ ಅವಕಾಶ ದೊರೆಯಲಿದೆ. ಗುರು ಜಪ ಮಾಡುವುದು ಉತ್ತಮ. ಭಾನು-ಮಂಗಳ-ಬುಧ ಶುಭ ದಿನಗಳು.


ಕರ್ಕಾಟಕ (ಪುನ 4, ಪುಷ್ಯ, ಆಶ್ಲೇಷ)
(ಹಿ.ಹು.ಹೆ.ಹೂ.ಡ.ಡಿ.ಡು.ಡೆ.ಡೋ)

ಸಾಲಗಾರರ ಕಾಟ, ರಾಗ, ದ್ವೇಷಗಳಿಗೆ ಒಳಗಾಗದೆ, ಕೌಟುಂಬಿಕ ವಿವಾದಗಳನ್ನು ಬಗೆಹರಿಸಿಕೊಳ್ಳಿ. ಮಕ್ಕಳ ನಡಾವಳಿಯಲ್ಲಿ ಕಂಡುಬರುವ ವ್ಯತ್ಯಾಸ ಸಮಸ್ಯೆಯನ್ನು ಹುಟ್ಟುಹಾಕಬಹುದು. ಕೆಲವು ವಿಷಯಗಳನ್ನು ಮಡದಿಯೊಂದಿಗೆ ಹಂಚಿಕೊಂಡಲ್ಲಿ ಮನಸ್ಸು ಹಗುರವಾದೀತು. ಸರ್ಕಾರಿ ನೌಕರರಿಗೆ ದೂರದೂರಿಗೆ ವರ್ಗಾವಣೆ, ವ್ಯವಹಾರದಲ್ಲಿ, ಪಾಲುದಾರರ ಅಭಿಪ್ರಾಯಗಳಿಗೆ ಮನ್ನಣೆ ಕೊಡುವುದು ಉತ್ತಮ. ಅನಾವಶ್ಯಕ ಪ್ರಯಾಣ ಮಾಡದಿರುವುದು ಲೇಸು. ಸರ್ಕಾರದಿಂದಾಗ ಬೇಕಾಗಿರುವ ಕೆಲಸಗಳನ್ನು ರಾಜಕಾರಣಿಗಳಿಂದ ಉಪಾಯವಾಗಿ ಮಾಡಿಸಿ ಕೊಳ್ಳುವಿರಿ. ಹನುಮಾನ್‌ ಚಾಲೀಸ್‌ ಸಾಧ್ಯವಾದಷ್ಟು ಹೆಚ್ಚು ಪಠಿಸಿರಿ. ಸೋಮ-ಗುರು-ಶುಕ್ರ ಶುಭ ದಿನಗಳು.

ಸಿಂಹ ( ಮಘ, ಪುಬ್ಬ, ಉತ್ತರ 1)

(ಮ.ಮಿ.ಮು.ಮೋ.ವೆ.ಟ.ಟಿ.ಟು.ಟೆ)

ಕಾರ್ಮಿಕ ವರ್ಗದವರು ಗುಂಪುಗಾರಿಕೆಯಿಂದ ನೌಕರಿ ಕಳೆದುಕೊಳ್ಳುವ ಸಂಭವವಿದೆ. ವಿದೇಶದಲ್ಲಿರುವ ಮಕ್ಕಳಿಂದ ನಿರೀಕ್ಷಿತ ನೆರವು, ಚಾಡಿ ಮಾತನ್ನು ಕೇಳಿ ಬಂಧುಗಳೊಂದಿಗೆ ದ್ವೇಷಕಟ್ಟಿಕೊಳ್ಳಬೇಡಿ. ಮನೆಕಟ್ಟುವ ವಿಚಾರವನ್ನು ಸದ್ಯದ ಮಟ್ಟಿಗೆ ಮುಂದೂಡುವುದು ಲೇಸು. ನಿರುದ್ಯೋಗಿ ಪದವೀಧರರಿಗೆ ಇಷ್ಟರಲ್ಲೇ ನೌಕರಿ ಸಂಭವವಿದೆ. ಹಿರಿಯರ ಕೋರಿಕೆಗಳನ್ನು ಪೂರೈಸಲು ಪ್ರಯತ್ನಿಸಿ. ನಿಮ್ಮ ನಿರ್ಲಕ್ಷೆಯಿಂದ ಆರೋಗ್ಯದ ಮೇಲೆ ಅಡ್ಡಪರಿಣಾಮ, ಅನಾವಶ್ಯಕವಾಗಿ ಸಾಲ ಮಾಡಲು ಹೋಗಬೇಡಿ. ಆದಾಯದ ಮೂಲದಲ್ಲಿ ಹೆಚ್ಚಳ, ವಿವಾದದಿಂದ ಸಾಧ್ಯವಾದಷ್ಟು ದೂರವಿರಲು ಪ್ರಯ ತ್ನಿಸಿ. ಗುರು ಚರಿತ್ರೆ ಪಾರಾಯಣ ಮಾಡಿ. ಭಾನು- ಸೋಮ-ಬುಧ ಶುಭ ದಿನಗಳು.


ಕನ್ಯಾ (ಉತ್ತರಾ 2,3,4, ಹಸ್ತಾ, ಚಿತ್ತಾ 1,2)
(ಟೋ.ಪ.ಪಿ.ಪು.ಷ.ಣ.ಠ.ಪೆ.ಪೋ)

ಹತ್ತು ಹಲವು ಕೆಲಸಗಳನ್ನು ಹಮ್ಮಿಕೊಂಡು ಪರದಾಡುವುದಕ್ಕಿಂತ ಅತೀ ಮುಖ್ಯವಾದ ಕೆಲಸಗಳನ್ನು ಮಾಡಿ ಮುಗಿಸುವುದು ಎಲ್ಲಾ ರೀತಿಯಿಂದಲೂ ಉತ್ತಮ ನಿರ್ಧಾರವಾಗುವುದು. ದೂರದೂರುಗಳಿಗೆ ಪ್ರಯಾಣ ಬೇಡ. ಹಣಕಾಸಿನ ವಿಚಾರದಲ್ಲಿ ಕಟ್ಟುನಿಟ್ಟಾಗಿರುವುದು ಲೇಸು. ಸಂಚಿತ ಧನವನ್ನು ಅನಿರೀಕ್ಷಿತವಾಗಿ ಖರ್ಚುಮಾಡಲೇ ಬೇಕಾದ ಸನ್ನಿವೇಶ ಮೂಡಿಬರಲಿದೆ. ನಿರುದ್ಯೋಗಿ ಮಕ್ಕಳ ಭವಿಷ್ಯದ ಚಿಂತೆ ನಿಮ್ಮನ್ನು ಬಾಧಿಸಲಿದೆ. ಆದಾಯದ ಮೂಲದಲ್ಲಿ ಕೊರತೆ, ಚಿಕ್ಕಮಕ್ಕಳನ್ನು ಬಿಸಿ ಪದಾರ್ಥಗಳಿಂದ ಅಥವಾ ವಿದ್ಯುದುಪಕರಣಗಳಿಂದ ದೂರವಿಡಿ. ಹನುಮಾನ್‌ ಚಾಲೀಸ್‌ ಪಠಿಸಿರಿ. ಬುಧ-ಗುರು-ಶುಕ್ರ ಶುಭ ದಿನಗಳು.


ತುಲಾ (ಚಿತ್ತಾ 3,4, ಸ್ವಾತಿ, ವಿಶಾಖ 1,2,3)
(ರ.ರಿ.ರು.ರೆ.ರೊ.ತ.ತಿ.ತು.ತೆ.)

ವಿವೇಚನಾ ರಹಿತವಾದ ಕೆಲಸಗಳಿಂದ ಭಾರೀ ಹಿನ್ನಡೆ, ಗೆಳೆಯರೊಂದಿಗೆ ಸಮಾಲೋಚಿಸಿ ನಿರ್ಧಾರ ತಗೆದುಕೊಳ್ಳಿ. ಕಾಲಕ್ಕೆ ತಕ್ಕಂತೆ ಬದಲಾಗದೆ ಬೇರೆ ದಾರಿಯಿಲ್ಲ. ಆದಾಯಕ್ಕೆ ತಕ್ಕಂತೆ ಜೀವನ ರೂಢಿಸಿಕೊಳ್ಳಿ, ಆಸ್ತಿ ವಿಚಾರದಲ್ಲಿ ಹಿರಿಯ ರೊಂದಿಗೆ ವಾಗ್ವಾದಗಳು ಬೇಡ. ಸಮಾಜ ಸೇವೆ ಮಾಡುವುದು ಒಳ್ಳೆಯದೇ ಆದರೂ, ಕೌಟುಂಬಿಕ ವಿಚಾರಗಳನ್ನು ಅಲಕ್ಷಿಸುವುದು ಮೂರ್ಖತನ, ಬರಬೇಕಾಗಿರುವ ಬಾಕಿ ಹಣವನ್ನು ಆದಷ್ಟು ಬೇಗ ವಸೂಲಿ ಮಾಡಿಕೊಳ್ಳಿ. ನಿಮ್ಮದಲ್ಲದ ವಸ್ತುಗಳನ್ನು ಅಪೇಕ್ಷಿಸುವುದು ದುರಾಸೆ. ವಾಹನದಲ್ಲಿ ಎಚ್ಚರ  ಸೋಮ-ಶುಕ್ರ-ಶನಿ-ಶುಭ ದಿನಗಳು.


ವೃಶ್ಚಿಕ (ವಿಶಾಖ 4, ಅನೂ, ಜೇಷ್ಠ)
(ತೊ.ನ.ನಿ.ನು.ನೆ.ನೋ.ಯ.ಯು.)

ಮಡದಿಯ ಆರೋಗ್ಯದ ಕಡೆ ಗಮನವಿಡದೇ ಹೋದಲ್ಲಿ ಅದು ವಿಪರೀತಕ್ಕೆ ಹೋಗಬಹುದು. ಆದಾಯವಿದ್ದರೂ ಅರ್ಥವಿಲ್ಲದ ಖರ್ಚುಗಳು, ಸಕಾರಣವಿಲ್ಲದೇ ನೆರೆಹೊರೆಯವರೊಂದಿಗೆ ವಾಗ್ವಾದಕ್ಕೆ ಇಳಿಯಬೇಡಿ. ಯಾರು ಏನೇ ಹೇಳಿದರೂ ಅವರಿವರ ಮಾತುಗಳಿಗೆ ಮನ್ನಣೆ ಕೊಡಬೇಡಿ. ಅಪರಿಚಿತರೊಂದಿಗೆ ವ್ಯವಹಾರ ಮಾಡಲು ಹೋಗಿ ಅಪಾರ ಹಣ ಕಳೆದುಕೊಳ್ಳುವ ಸಂಭವವಿದೆ. ಗೆಳೆಯರು ನೀಡುವ ಸಲಹೆಗಳು ಅರ್ಥಪೂರ್ಣವಾಗಿಯೇ ಇರುತ್ತವೆ. ಅತಿಯಾದ ತಿರುಗಾಟ ಆರೋಗ್ಯಕ್ಕೆ ಅಡ್ಡಪರಿಣಾಮ, ದೂರದ ಪ್ರಯಾಣ ಬೇಡವೇ ಬೇಡ. ಹೈನುಗಾರಿಕೆ ಲಾಭದಾಯಕ, ಗೋ ಸೇವೆ ಮಾಡಿರಿ. ಭಾನು-ಮಂಗಳ-ಗುರು ಶುಭ ದಿನಗಳು.


ಧನಸ್ಸು (ಮೂಲ, ಪೂರ್ವಾಷಾಡ, ಉತ್ತರಾಷಾಡ)
(ಯೆ.ಯೋ. ಬ.ಬಿ.ಬು.ಧ.ಫ.ಡ.ಬೆ.)

ವಿದ್ಯಾರ್ಥಿಗಳಿಗೆ ಗುರುವೃಂದದ ಸಹಾಯ ಅತ್ಯಾವಶ್ಯಕವಾದ್ದರಿಂದ, ಶ್ರದ್ಧೆ ಹಾಗೂ ಶಿಸ್ತಿನಿಂದ ಅವರ ಮಾರ್ಗದರ್ಶನದಂತೆ ನಡೆಯುವುದು ಉತ್ತಮ. ವ್ಯವಹಾರದಲ್ಲಿ ಪಾಲುದಾರರ ಸಲಹೆ-ಸೂಚನೆಗಳಿಗೂ ಮನ್ನಣೆ ಕೊಡಿ, ವೈದ್ಯ ವೃಂದ ದವರು ತಮ್ಮ ವೃತ್ತಿಯಲ್ಲಿ ಎಚ್ಚರದಿಂದಿರಿ. ಅವಿವಾಹಿತರಿಗೆ ಕಂಕಣಭಾಗ್ಯ, ಬೇರೆಯವರ ಕೌಟುಂಬಿಕ ವಿಷಯದಲ್ಲಿ ನಿಮ್ಮ ಪ್ರವೇಶ ಖಂಡಿತಾ ಬೇಡ. ಆದಾಯದ ಮೂಲದಲ್ಲಿ ತೀವ್ರ ಹೆಚ್ಚಳ ಕಂಡುಬರಲಿದೆ. ಬೇರೆಯವರ ಹಣ-ಕಾಸಿನ ವಿಚಾರದಲ್ಲಿ ಜಾಮೀನಾಗ ಬೇಡಿ, ಸಿಕ್ಕಲ್ಲಿ, ಕುಲದೇವತಾ ದರ್ಶನ ಮಾಡಿರಿ. ಭಾನು-ಸೋಮ-ಗುರು ಶುಭ ದಿನಗಳು.


ಮಕರ (ಉತ್ತರಾಷಾಢ 2,3,4, ಶ್ರವಣ, ಧನಿಷ್ಠಾ 1,2)
(ಜೊ.ಜ.ಜಿ.ಜೆ.ಶಿ.ಶು.ಶೇ.ಶೋ.ಗ.ಗಿ)

ನಿಮ್ಮ ಉದಾಸೀನತೆಯಿಂದಾಗಿ ಕೆಲಸಗಳು ಮಂದಗತಿಯಲ್ಲಿ ಸಾಗಲಿವೆ. ಜೊತೆಗೆ, ಕಛೇರಿಯಲ್ಲೂ ಅತಿ ಹೆಚ್ಚಿನ ಕಾರ್ಯಭಾರ ಬೀಳಲಿದೆ. ಕರಕುಶಲ ವಸ್ತುಗಳಿಗೆ ಮತ್ತು ಅದರ ತಯಾರಕರಿಗೆ ಹೆಚ್ಚಿನ ಬೇಡಿಕೆ ಬರಲಿದೆ. ಹೂವು-ಹಣ್ಣು, ತರಕಾರಿ ಮಾರಾಟ ಗಾರರಿಗೆ ಹೆಚ್ಚಿನ ವಹಿವಾಟಿನೊಂದಿಗೆ, ಹೆಚ್ಚಿನ ಲಾಭ. ಹಣಕಾಸಿನ ಹರಿವಿನಲ್ಲೂ ಏರಿಕೆ ಕಂಡುಬರಲಿದೆ. ಸಗಟು, ಚಿಲ್ಲರೆ ವ್ಯಾಪಾರಿಗಳು ವ್ಯವಹಾರದಲ್ಲಿ ಮೋಸ ಹೋಗುವ ಸಂಭವವಿದೆ. ರಾಜಕಾರಣಿಗಳು ತಮ್ಮ ಹಿಂಬಾಲಕರಿಂದಲೇ ಕೆಟ್ಟ ಹೆಸರನ್ನು ಪಡೆಯುವರು. ಕಂದಾಯ ಇಲಾಖೆಯಲ್ಲಿ ಕೆಲಸ ಮಾಡುವವರು, ವಂಚನೆಯ ಸುಳಿಗೆ ಸಿಲುಕುವ ಸಂಭವವಿದೆ. ಅವಿವಾಹಿತರಿಗೆ ಕಂಕಣ ಬಲ. ಬುಧ-ಶುಕ್ರ–ಶನಿ ಶುಭ ದಿನಗಳು.


ಕುಂಭ (ಧನಿಷ್ಠಾ, ಶತಭಿಷಾ, ಪೂರ್ವಾಭಾದ್ರ 1,2,3)
(ಗು.ಗೆ.ಗೊ.ಸ.ಸಿ.ಸು.ಸೆ.ಸೋ.ದ)

ನೀವು ಪ್ರಸಿದ್ಧ ಕಂಪನಿ ನಿರ್ವಾಹಕರಾಗಿದ್ದಲ್ಲಿ, ನಿಮ್ಮ ಹೆಸರು ಬೇರೆಯವ ರಿಂದ ದುರ್ಬಳಕೆಯಾಗದಂತೆ ಎಚ್ಚರವಹಿಸಿ, ರಾಜಕಾರಣಿಗಳು ಪಕ್ಷದ ವರಿಷ್ಠರ ಕೃಪಾಕಟಾಕ್ಷಕ್ಕೆ ಪಾತ್ರರರಾಗುವರು. ಆದರೆ ತಮ್ಮ ಹಿಂಬಾಲಕರಿಂದ ಅಥವಾ ಬೇರೆಯರ ಕೈವಾಡದಿಂದ ನಿಮ್ಮ ಪದೋನ್ನತಿಗೆ ಧಕ್ಕೆ ಬರಬಹುದು. ಹಿರಿಯರ ಆರೋಗ್ಯದಲ್ಲಿ ಏರುಪೇರು, ಅತಿ ದೂರದ ಊರುಗಳಿಗೆ ಪ್ರಯಾಣ ಮಾಡಬೇಡಿ. ಆಸ್ತಿಗೆ, ವ್ಯವಹಾರಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಜೋಪಾನವಾಗಿ ಕಾಪಾಡಿ. ಆದಾಯದ ಮೂಲದಲ್ಲಿ ಹೆಚ್ಚಳವಿದ್ದರೂ, ಉಳಿತಾಯ ಸಾಧ್ಯವಿಲ್ಲ. ಮಕ್ಕಳ ವಿದ್ಯಾಭ್ಯಾಸದ ಕಡೆ ಎಚ್ಚರವಿರಲಿ. ಬುಧ-ಗುರು-ಶನಿ ಶುಭ ದಿನಗಳು.


ಮೀನ (ಪೂರ್ವಾಭಾದ್ರ 4, ಉತ್ತರಾಭಾದ್ರ, ರೇವತಿ)
(ದಿ.ದು.ಖ.ಝ.ಥ.ದೆ.ದೋ.ಖ.ಚ.ಚಿ.)

ಮತ್ತೊಬ್ಬರ ಹುಳುಕನ್ನು ಎತ್ತಿ ತೋರಿಸಲು ಹೋಗಿ, ನೀವೇ ಅಪಮಾನಕ್ಕೆ ಗುರಿಯಾಗುವಿರಿ. ಮಹಿಳೆಯರು ಅಪರಿಚಿತ ವ್ಯಕ್ತಿಗಳಿಂದ ವಂಚನೆಗೊಳ ಗಾಗುವಿರಿ, ಹೊಸ ವಾಹನ ಖರೀದಿ ಯೋಗವಿದೆ. ಸೋದರನು ಮಾಡಲಿರುವ ಆರ್ಥಿಕ ನೆರವನ್ನು ನಿರಾಕರಿಸಬೇಡಿ. ಆದಾಯದ ಮೂಲದಲ್ಲಿ ಆರಂಭಿಕ ಏರಿಕೆ ಕಂಡರೂ ಮಧ್ಯ ದಲ್ಲಿ ಅನಿರೀಕ್ಷಿತವಾಗಿ ಇಳಿಮುಖವಾಗಲಿದೆ. ಆರೋಗ್ಯದ ವಿಚಾರದಲ್ಲಿ ಎಚ್ಚರ ದಿಂದಿರಿ. ಚಿಕ್ಕಮಕ್ಕಳಿಗೆ, ಶೀತಬಾಧೆ, ಸರ್ಕಾರಿ ನೌಕರರಿಗೆ ರಾಜಕಾರಣಿಗಳಿಂದ ಒತ್ತಡ, ಲಲಿತಾಷ್ಟೋತ್ತರ ಪಠಿಸಿರಿ. ಗುರು-ಶುಕ್ರ-ಶನಿ-ಶುಭ ದಿನಗಳು.


ವಿಶೇಷ ದಿನಗಳು : ದಿನಾಂಕ : 11.03.2021, ಗುರುವಾರ, ಮಹಾಶಿವರಾತ್ರಿ