ಚಿತ್ರದಲ್ಲಿ ಸುದ್ದಿ

Home ಚಿತ್ರದಲ್ಲಿ ಸುದ್ದಿ
ಸಾಯಿಬಾಬಾ ಮಂದಿರದಲ್ಲಿ  ಪೂಜೆ ಸಲ್ಲಿಸಿದ ಶಾಸಕ ರವೀಂದ್ರನಾಥ

ಸಾಯಿಬಾಬಾ ಮಂದಿರದಲ್ಲಿ ಪೂಜೆ ಸಲ್ಲಿಸಿದ ಶಾಸಕ ರವೀಂದ್ರನಾಥ

ನಗರದ ಎಂ.ಸಿ.ಸಿ. ಎ ಬ್ಲಾಕ್‌ನಲ್ಲಿರುವ ಶ್ರೀ ಸಾಯಿಬಾಬಾ ಮಂದಿರಕ್ಕೆ ನವರಾತ್ರಿ ಮೊದಲ ದಿನದಂದು ಭೇಟಿ ನೀಡಿದ್ದ ಹಿರಿಯ ಶಾಸಕ  ಎಸ್.ಎ ರವೀಂದ್ರನಾಥ್ ಅವರು ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು.

ನರಸಗೊಂಡನಹಳ್ಳಿಯಲ್ಲಿ ಶ್ರವಣ ದೋಷ ತಪಾಸಣೆ

ನರಸಗೊಂಡನಹಳ್ಳಿಯಲ್ಲಿ ಶ್ರವಣ ದೋಷ ತಪಾಸಣೆ

ಲಯನ್ಸ್‌ ಕ್ಲಬ್‌ ದಾವಣಗೆರೆ ಹಾಗೂ ಲಯನ್ಸ್‌ ಕ್ವೆಸ್ಟ್‌ ವಾಕ್ ಮತ್ತು ಶ್ರವಣ ಕೇಂದ್ರಗಳ ಆಶ್ರಯದಲ್ಲಿ ಹರಿಹರ ತಾಲ್ಲೂಕು ನರಸಗೊಂಡನಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಉಚಿತ ಶ್ರವಣ ದೋಷ ತಪಾಸಣೆ ಶಿಬಿರವನ್ನು ನಡೆಸಲಾಯಿತು.

ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತ ಸೈಕ್ಲೋಥಾನ್

ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತ ಸೈಕ್ಲೋಥಾನ್

ಡಿಜಿಟಲ್ ಸಮಾನತೆ ಎಂಬ ಘೋಷವಾಕ್ಯದಡಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸೈಕ್ಲೋಥಾನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಮಲೇಬೆನ್ನೂರಿನ ವೀರಭದ್ರೇಶ್ವರ ದೇಗುಲಕ್ಕೆ ಯಡಿಯೂರಪ್ಪ ಭೇಟಿ

ಮಲೇಬೆನ್ನೂರಿನ ವೀರಭದ್ರೇಶ್ವರ ದೇಗುಲಕ್ಕೆ ಯಡಿಯೂರಪ್ಪ ಭೇಟಿ

ಮಲೇಬೆನ್ನೂರು : ಪಟ್ಟಣದ ಹೊರವಲಯದಲ್ಲಿರುವ ಶ್ರೀ ಸಿದ್ಧಿ ವಿನಾಯಕ, ಶ್ರೀ ಭದ್ರಕಾಳಿ, ಶ್ರೀ ಕಾಲಭೈರವ, ಶ್ರೀ ನಾಗ ಪರಿವಾರದೊಂದಿಗೆ ಸ್ಥಾಪಿಸಿರುವ ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಯಡಿಯೂರಪ್ಪ ಅವರು ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು.

ಹರಿಹರ ತಾಲ್ಲೂಕಿನಲ್ಲಿ 8 ಸಾವಿರ ಜನರಿಗೆ ಲಸಿಕೆ

ಹರಿಹರ ತಾಲ್ಲೂಕಿನಲ್ಲಿ 8 ಸಾವಿರ ಜನರಿಗೆ ಲಸಿಕೆ

ಹರಿಹರ : ತಾಲ್ಲೂಕಿನಲ್ಲಿ ಸುಮಾರು 17 ಸಾವಿರ ಜನರಿಗೆ ಲಸಿಕೆ ಹಾಕುವ  ಗುರಿ ಹೊಂದಿದ್ದು, ಇದರಲ್ಲಿ ನಿನ್ನೆ 8 ಸಾವಿರ ಮಂದಿಗೆ ಲಸಿಕೆಯನ್ನು ಹಾಕಲಾಗಿದೆ ಎಂದು ತಹಶೀಲ್ದಾರ್‌ ಕೆ.ಬಿ. ರಾಮಚಂದ್ರಪ್ಪ ತಿಳಿಸಿದ್ದಾರೆ.

ಕೆ.ಜಾವೀದ್ ಸಾಬ್, ಕೆ.ಜೆ.ಅಫಾಕ್ ರಜ್ವಿ ಅವರಿಗೆ ಟ್ರೇಡ್ ಎಕ್ಸ್‌ಲೆನ್ಸ್ ಅವಾರ್ಡ್

ಕೆ.ಜಾವೀದ್ ಸಾಬ್, ಕೆ.ಜೆ.ಅಫಾಕ್ ರಜ್ವಿ ಅವರಿಗೆ ಟ್ರೇಡ್ ಎಕ್ಸ್‌ಲೆನ್ಸ್ ಅವಾರ್ಡ್

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್.ಕೆ.ಸಿ.ಸಿ.ಐ) ಕೊಡಮಾಡುವ 2021ನೇ ಸಾಲಿನ ಟ್ರೇಡ್ ಎಕ್ಸ್‍ಲೆನ್ಸ್ ಅವಾರ್ಡ್ ಪ್ರಶಸ್ತಿ ನಗರದ ರಜ್ವಿ ಟ್ರೇಡರ್ಸ್‍ನ ಮಾಲೀಕ ಕೆ.ಜಾವೀದ್ ಸಾಬ್ ಮತ್ತು ಕೆ.ಜೆ. ಹೊಂಡೈ ಮಾಲೀಕ ಕೆ.ಜೆ.ಅಫಾಕ್ ರಜ್ವಿ ಅವರಿಗೆ ದೊರೆತಿದೆ.

ಬಿ.ಟಿ. ಜಾಹ್ನವಿಗೆ ಸಾಹಿತ್ಯಶ್ರೀ ಪ್ರಶಸ್ತಿ

ಬಿ.ಟಿ. ಜಾಹ್ನವಿಗೆ ಸಾಹಿತ್ಯಶ್ರೀ ಪ್ರಶಸ್ತಿ

`ಸಾಹಿತ್ಯಶ್ರೀ ಗೌರವ ಪ್ರಶಸ್ತಿ'ಗೆ ಭಾಜನರಾಗಿರುವ ನಗರದ ಹಿರಿಯ ಲೇಖಕಿ ಬಿ.ಟಿ.ಜಾಹ್ನವಿ ನಿರಂಜನ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಭಾನುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ದಕ್ಷಯಜ್ಞ

ದಕ್ಷಯಜ್ಞ

ವೀರಭದ್ರೇಶ್ವರ ಜಯಂತ್ಯೋತ್ಸವದ ಅಂಗವಾಗಿ ಮಂಗಳವಾರ ರಾತ್ರಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶಿವಮೊಗ್ಗದ ಅಂತರರಾಷ್ಟ್ರೀಯ ಭರತನಾಟ್ಯ ಕಲಾವಿದ ವಿದ್ವಾನ್ ಕೇಶವಕುಮಾರ್ ಶಿಷ್ಯಂದಿರು ನಡೆಸಿಕೊಟ್ಟ ದಕ್ಷಯಜ್ಞ ನೃತ್ಯರೂಪಕ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿತ್ತು.

ಗೋಡೆ ಬರಹ ಚಿತ್ರಕಲಾ ಶಿಕ್ಷಕರಿಗೆ ಸನ್ಮಾನ

ಗೋಡೆ ಬರಹ ಚಿತ್ರಕಲಾ ಶಿಕ್ಷಕರಿಗೆ ಸನ್ಮಾನ

ಹರಿಹರ : ನವೀಕೃತ ಗೋಡೆ ಬರಹವನ್ನು ಮಾಡಿದ ಚಿತ್ರಕಲಾ ಶಿಕ್ಷಕರಾದ ಸಿ. ನಾಗರಾಜ ಚಿರಡೋಣಿ, ಆಂಜನೇಯ ನಾಯ್ಕ, ಕರೆಕಟ್ಟೆ ಚನ್ನಗಿರಿ, ಅನಿಲ್‌ಕುಮಾರ್ ಅರಸಾಪುರ, ಎ.ಎಸ್. ಮುರುಘರಾಜೇಂದ್ರ ಅವರುಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಸಿ. ಸಿದ್ದಪ್ಪ ಸನ್ಮಾನಿಸಿದರು.

ರಾಜನಹಳ್ಳಿ : ಗಂಡುಗಲಿ ಕುಮಾರರಾಮ ಜಯಂತಿ

ರಾಜನಹಳ್ಳಿ : ಗಂಡುಗಲಿ ಕುಮಾರರಾಮ ಜಯಂತಿ

ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ವೀರ ಗಂಡುಗಲಿ ಕುಮಾರ ರಾಮನ ಜಯಂತಿಯನ್ನು ಆಚರಿಸಲಾ ಯಿತು. ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಕುಮಾರ ರಾಮನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಪೂಜೆ ಸಲ್ಲಿಸಿದರು.

ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯ ರಕ್ಷಿಸಿದ 112 ತುರ್ತು ಪೊಲೀಸರು

ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯ ರಕ್ಷಿಸಿದ 112 ತುರ್ತು ಪೊಲೀಸರು

ಪತಿಯ ಕಿರುಕುಳ ಹಿನ್ನಲೆಯಲ್ಲಿ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯೋರ್ವಳ ಪ್ರಾಣವನ್ನು ಇಲ್ಲಿನ 112 ತುರ್ತು ಪೊಲೀಸರು ರಕ್ಷಿಸಿದ್ದಾರೆ.