ಚಿತ್ರದಲ್ಲಿ ಸುದ್ದಿ

Home ಚಿತ್ರದಲ್ಲಿ ಸುದ್ದಿ
ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯ ರಕ್ಷಿಸಿದ 112 ತುರ್ತು ಪೊಲೀಸರು

ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯ ರಕ್ಷಿಸಿದ 112 ತುರ್ತು ಪೊಲೀಸರು

ಪತಿಯ ಕಿರುಕುಳ ಹಿನ್ನಲೆಯಲ್ಲಿ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯೋರ್ವಳ ಪ್ರಾಣವನ್ನು ಇಲ್ಲಿನ 112 ತುರ್ತು ಪೊಲೀಸರು ರಕ್ಷಿಸಿದ್ದಾರೆ. 

ವೀರಶೈವ ಪುಣ್ಯಾಶ್ರಮದಲ್ಲಿ ಪ್ರವಚನ

ವೀರಶೈವ ಪುಣ್ಯಾಶ್ರಮದಲ್ಲಿ ಪ್ರವಚನ

ನಗರದ ಬಾಡಾ ಕ್ರಾಸ್ ಬಳಿಯಿರುವ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಕಳೆದ ವಾರ ಏರ್ಪಡಿಸಿದ್ದ ಲಿಂ. ಪುಟ್ಟರಾಜ ಗವಾಯಿಗಳ ಪ್ರವಚನ ಕಾರ್ಯಕ್ರಮವನ್ನು ಗದುಗಿನ ವೀರೇಶ್ವರ ಪುಣ್ಯಾಶ್ರಮದ ಶ್ರೀ ಕಲ್ಲಯ್ಯಜ್ಜ ಮತ್ತು ಆವರಗೊಳ್ಳದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮಿಗಳು ಉದ್ಘಾಟಿಸಿದರು.

ಹರಿಹರದ ಪಂಚಮಸಾಲಿ ಪೀಠದ ಜಗದ್ಗುರುಗಳಿಂದ ಭದ್ರೆಗೆ ಬಾಗಿನ

ಹರಿಹರದ ಪಂಚಮಸಾಲಿ ಪೀಠದ ಜಗದ್ಗುರುಗಳಿಂದ ಭದ್ರೆಗೆ ಬಾಗಿನ

ಹರಿಹರ : ಇಲ್ಲಿನ ವೀರಶೈವ ಪಂಚಮಸಾಲಿ ಗುರುಪೀಠದ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ತುಂಗಭದ್ರಾ ನದಿಗೆ ಬಾಗಿನ ಅರ್ಪಿಸಲಾಯಿತು.

ಅಂಧಮಕ್ಕಳಿಗೆ ಅಗತ್ಯ ಸಾಮಗ್ರಿಗಳ ವಿತರಣೆ

ಅಂಧಮಕ್ಕಳಿಗೆ ಅಗತ್ಯ ಸಾಮಗ್ರಿಗಳ ವಿತರಣೆ

ಮಲೇಬೆನ್ನೂರು : ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹುಟ್ಟುಹಬ್ಬದ ಅಂಗವಾಗಿ ಬಾಡಾ ಕ್ರಾಸ್ ಬಳಿ ಇರುವ ವೀರೇಶ್ವರ ಪುಣ್ಯಾಶ್ರಮದಲ್ಲಿ ಅಂಧ ಮಕ್ಕಳಿಗೆ ಕಮಲಾಪುರ ಗ್ರಾಮದ ವಿದ್ಯಾರ್ಥಿ ಶಂಕರಮೂರ್ತಿ ಅಗತ್ಯವಿರುವ ಸಾಮಗ್ರಿಗಳು ಹಾಗೂ ಸಿಹಿ ವಿತರಿಸಿದರು.

ಸ್ವಾತಂತ್ರ್ಯೋತ್ಸವ : ಆನ್‌ಲೈನ್ ಝೂಮ್ ಮೀಟಿಂಗ್‌ನಲ್ಲಿ ಎಸ್ಸೆಸ್ಸೆಂ

ಸ್ವಾತಂತ್ರ್ಯೋತ್ಸವ : ಆನ್‌ಲೈನ್ ಝೂಮ್ ಮೀಟಿಂಗ್‌ನಲ್ಲಿ ಎಸ್ಸೆಸ್ಸೆಂ

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ 74ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಪ್ರಯುಕ್ತ ಝೂಮ್ ಆನ್‍ಲೈನ್‌ ಮೀಟಿಂಗ್ ಇಂದು ನಡೆಯಿತು.

ಭಾನುವಳ್ಳಿಯಲ್ಲಿ ತೊಟ್ಟಿಲು ಶಾಸ್ತ್ರದ ಸಿಹಿಯೂಟ ಸೇವಿಸಿ ಅಸ್ವಸ್ಥ

ಭಾನುವಳ್ಳಿಯಲ್ಲಿ ತೊಟ್ಟಿಲು ಶಾಸ್ತ್ರದ ಸಿಹಿಯೂಟ ಸೇವಿಸಿ ಅಸ್ವಸ್ಥ

ಮಲೇಬೆನ್ನೂರು : ತೊಟ್ಟಿಲು ಶಾಸ್ತ್ರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಿಹಿ ಊಟ ಮಾಡಿದವರ ಪೈಕಿ 49 ಮಂದಿ ಅಸ್ವಸ್ಥರಾಗಿರುವ ಘಟನೆ ಭಾನುವಳ್ಳಿ ಗ್ರಾಮದಲ್ಲಿ ನಿನ್ನೆ ನಡೆದಿದೆ. 

ಕುರೇಮಾಗಾನಹಳ್ಳಿ ಕೆರೆ ದುರಸ್ತಿ

ಕುರೇಮಾಗಾನಹಳ್ಳಿ ಕೆರೆ ದುರಸ್ತಿ

ಹರಪನಹಳ್ಳಿ ತಾಲ್ಲೂಕಿನ ಜಗಳೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕುರೇಮಾಗಾನಹಳ್ಳಿ ಕೆರೆ ಇತ್ತೀಚೆಗೆ ಸುರಿದ ಭಾರೀ ಮಳೆಗೆ ತುಂಬಿದ್ದು, ಕೆರೆ ಏರಿ ಬಿರುಕು ಬಿಟ್ಟಿದೆ.

ಮೆಡ್ಲೇರಿ ಬೀರೇಶ್ವರ ಜಾತ್ರೆ ರದ್ದು

ಮೆಡ್ಲೇರಿ ಬೀರೇಶ್ವರ ಜಾತ್ರೆ ರದ್ದು

ರಾಣೇಬೆನ್ನೂರು : ತಾಲ್ಲೂಕಿನ ಮೆಡ್ಲೇರಿ ಗ್ರಾಮದಲ್ಲಿ ಪಂಚಮಿ ಹಬ್ಬದ ಅಂಗವಾಗಿ ನಾಳೆ ದಿನಾಂಕ 6 ರಿಂದ 10 ರವರೆಗೆ ನಡೆಯಬೇಕಾಗಿದ್ದ ಬೀರೇಶ್ವರ ದೇವರ ಜಾತ್ರೆಯನ್ನು ಕೋವಿಡ್‌ ಮೂರನೇ ಅಲೆ ವ್ಯಾಪಕವಾಗಿ ಹರಡುವ ಭೀತಿಯಿಂದ ತಾಲ್ಲೂಕು ಆಡಳಿತದ ಆದೇಶದನ್ವಯ ರದ್ದುಗೊಳಿಸಲಾಗಿದೆ

ಪೊಲೀಸ್ ಅಧಿಕಾರಿಗಳ ನಿವೃತ್ತಿ   ಜಿಲ್ಲಾ ಪೊಲೀಸ್ ಬೀಳ್ಕೊಡುಗೆ

ಪೊಲೀಸ್ ಅಧಿಕಾರಿಗಳ ನಿವೃತ್ತಿ ಜಿಲ್ಲಾ ಪೊಲೀಸ್ ಬೀಳ್ಕೊಡುಗೆ

ಪೊಲೀಸ್ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಪಿಎಸ್‌ಐ ಕೃಷ್ಣಪ್ಪ, ಡಿಎಆರ್ ಘಟಕದ ಆರ್‌ಎಸ್‌ಐ ಯಲ್ಲಪ್ಪ, ಬಸವ ನಗರ ಠಾಣೆ ಎಎಸ್‌ಐ ಸತ್ಯನಾರಾಯಣ, ದಾವಣಗೆರೆ ಗ್ರಾಮಾಂತರ ಠಾಣೆಯ ಶ್ರೀರಾಮರೆಡ್ಡಿ ಹಾಗೂ ಸ್ವ ಇಚ್ಛಾ ನಿವೃತ್ತಿ ಪಡೆದ ಉತ್ತರ ಸಂಚಾರ ಠಾಣೆಯ ಪಿಎಸ್‌ಐ ಸತೀಶ್ ಬಾಬು ಅವರಿಗೆ ಶುಭ ಕೋರಿ ಬೀಳ್ಕೊಟ್ಟರು.

ಕುಟುಂಬಗಳಿಗೆ ಫುಡ್‍ ಕಿಟ್ ವಿತರಣೆ

ಕುಟುಂಬಗಳಿಗೆ ಫುಡ್‍ ಕಿಟ್ ವಿತರಣೆ

ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟದಲ್ಲಿ ಸಿಲುಕಿದ್ದ ಮಹಾನಗರ ಪಾಲಿಕೆಯಲ್ಲಿ ನೀರುಗಂಟಿಗಳಾಗಿ ಒಂದು ದಿನವೂ ತಪ್ಪದೇ ತಮ್ಮ ಕಾರ್ಯ ನಿರ್ವಹಿಸಿದ ಸುಮಾರು 20 ಜನರಿಗೆ ಫುಡ್ ಕಿಟ್ ಗಳನ್ನು ನಗರದ ಹೆಸರಾಂತ ಸ್ತ್ರಿ ರೋಗ ತಜ್ಞೆ ಡಾ. ಗಾಯತ್ರಿ ಪಾಟೀಲ್ ವಿತರಿಸಿದರು.

ಶಿಕ್ಷಕರಿಗೆ ಆಹಾರ ಧಾನ್ಯ ಕಿಟ್ ವಿತರಣೆ

ಶಿಕ್ಷಕರಿಗೆ ಆಹಾರ ಧಾನ್ಯ ಕಿಟ್ ವಿತರಣೆ

ಕೋವಿಡ್ ಹಿನ್ನೆಲೆಯಲ್ಲಿ ಆದ ಲಾಕ್‌ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೊಳಗಾದ ಶಿಕ್ಷಕರಿಗೆ ದೇವರಬೆಳಕೆರೆ ಸರ್ಕಾರಿ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕಿ ಶ್ರೀಮತಿ ಹೆಚ್.ಕೆ.ನಾಗರತ್ನಮ್ಮ ಅವರು ಆಹಾರ ಧಾನ್ಯಗಳ ಕಿಟ್ ವಿತರಿಸಿದರು.