ಚಿತ್ರದಲ್ಲಿ ಸುದ್ದಿ

Home ಚಿತ್ರದಲ್ಲಿ ಸುದ್ದಿ
ನಾಮದೇವ ಸಿಂಪಿ ಸಮಾಜದಿಂದ ಸಂಭ್ರಮದ ವಿಠ್ಠಲ ರುಕ್ಮಿಣಿ ಮಹೋತ್ಸವ

ನಾಮದೇವ ಸಿಂಪಿ ಸಮಾಜದಿಂದ ಸಂಭ್ರಮದ ವಿಠ್ಠಲ ರುಕ್ಮಿಣಿ ಮಹೋತ್ಸವ

ನಗರದ ದೊಡ್ಡಪೇಟೆಯ ಶ್ರೀ ವಿಠಲ ಮಂದಿರದಲ್ಲಿ ನಾಮದೇವ ಸಿಂಪಿ ಸಮಾಜದ ದೈವ ಮಂಡಳಿಯಿಂದ ಶ್ರೀ ಪಾಂಡುರಂಗ ವಿಠ್ಠಲ ರುಕ್ಮಿಣಿ ದಿಂಡಿ ಮಹೋತ್ಸವ ಇಂದು ಜರುಗಿತು.

ಯಲ್ಲಮ್ಮನಗರದಲ್ಲಿ ರಾಜ್ಯೋತ್ಸವ

ಯಲ್ಲಮ್ಮನಗರದಲ್ಲಿ ರಾಜ್ಯೋತ್ಸವ

ನಗರ ಪಾಲಿಕೆಯ 15ನೇ ವಾರ್ಡ್‍ನ ಯಲ್ಲಮ್ಮ ನಗರದ ಚಡ್ಡಿ ರಾಮಣ್ಣ ಹೋಟೆಲ್ ಬಳಿ 66ನೇ ಕನ್ನಡ ರಾಜ್ಯೋತ್ಸವ ಹಾಗೂ ಪುನೀತ್ ರಾಜಕುಮಾರ್ ಅವರಿಗೆ ನುಡಿ ನಮನ ಕಾರ್ಯಕ್ರಮ ನಡೆಯಿತು.

ಹಿರಿಯ ಶಾಸಕ ಎಸ್‌ಎಆರ್‌ಗೆ ದೇವರಮನಿ ಶಿವಕುಮಾರ್‌ ಗೌರವಾರ್ಪಣೆ

ಹಿರಿಯ ಶಾಸಕ ಎಸ್‌ಎಆರ್‌ಗೆ ದೇವರಮನಿ ಶಿವಕುಮಾರ್‌ ಗೌರವಾರ್ಪಣೆ

ಎಸ್.ಎ.ರವೀಂದ್ರನಾಥ್ ಅವರ 75ನೇ ಜನ್ಮ ದಿನದ `ಅಮೃತ ಮಹೋತ್ಸವ' ಕಾರ್ಯಕ್ರಮದ ಸಂದರ್ಭದಲ್ಲಿ, ದಾವಣಗೆರೆ - ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದೇವರಮನಿ ಶಿವಕುಮಾರ್ ಅವರು ರವೀಂದ್ರನಾಥ್ ಮತ್ತು ಶ್ರೀಮತಿ ರತ್ನಮ್ಮ ದಂಪತಿಗೆ ಸ್ಮರಣಿಕೆ, ಬೃಹತ್ ಪುಷ್ಪಹಾರದೊಂದಿಗೆ ಸನ್ಮಾನಿಸಿ, ಗೌರವಿಸಿದರು.

ಜಲಸಸ್ಯ ರಾಶಿ ತೆರವು  ಕಾರ್ಯ  ಮುಂದುವರಿಕೆ

ಜಲಸಸ್ಯ ರಾಶಿ ತೆರವು ಕಾರ್ಯ ಮುಂದುವರಿಕೆ

ಮಲೇಬೆನ್ನೂರು ಸಮೀಪದ ದೇವರಬೆಳೆಕೆರೆ ಪಿಕಪ್ ಜಲಾಶಯದ ಗೋಡ್ ಬಳೆ ಗೇಟ್ ಬಳಿ ಸಂಗ್ರಹವಾಗಿರುವ ಜಲ ಸಸ್ಯರಾಶಿಯನ್ನು ತೆರವು ಗೊಳಿಸುವ ಕಾರ್ಯ ಎರಡನೇ ದಿನವಾದ ಮಂಗಳವಾರವೂ ನಡೆಯಿತು. ಶಾಸಕ ಎಸ್.ರಾಮಪ್ಪ ಸ್ಥಳಕ್ಕೆ ಆಗಮಿಸಿ ಕಾಮಗಾರಿ ವೀಕ್ಷಿಸಿದರು.

ಖನ್ನೂರ ವಿದ್ಯಾನಿಕೇತನ ಕಾಲೇಜಿನಲ್ಲಿ ಕಾಮರ್ಸ್ ಫೋರಂ ಉದ್ಘಾಟನೆ

ಖನ್ನೂರ ವಿದ್ಯಾನಿಕೇತನ ಕಾಲೇಜಿನಲ್ಲಿ ಕಾಮರ್ಸ್ ಫೋರಂ ಉದ್ಘಾಟನೆ

ರಾಣೇಬೆನ್ನೂರು : ಇಲ್ಲಿನ ಖನ್ನೂರ ವಿದ್ಯಾನಿಕೇತನ ಪದವಿ ಪೂರ್ವ ಕಾಲೇಜಿನಲ್ಲಿ  ಕಾಮರ್ಸ್ ಫೋರಂ (ವಾಣಿಜ್ಯ ವೇದಿಕೆ) ಮತ್ತು ಲೋಗೋವನ್ನು  ಗಿಡಕ್ಕೆ ನೀರುಣಿಸುವ ಮೂಲಕ ಉದ್ಘಾಟಿಸಲಾಯಿತು. 

ಶ್ರೀ ಸಂಗನಬಸವ ಸ್ವಾಮೀಜಿಗೆ ಎಸ್ಸೆಸ್ – ಎಸ್ಸೆಸ್ಸೆಂ ಸಂತಾಪ

ಶ್ರೀ ಸಂಗನಬಸವ ಸ್ವಾಮೀಜಿಗೆ ಎಸ್ಸೆಸ್ – ಎಸ್ಸೆಸ್ಸೆಂ ಸಂತಾಪ

ಇಂದು ಲಿಂಗೈಕ್ಯರಾದ ಗದಗ ಜಿಲ್ಲೆಯ ಹಾಲಕೆರೆಯ ಶ್ರೀ ಅನ್ನದಾನೇಶ್ವರ ಸಂಸ್ಥಾನ ಮಠದ ಅಭಿನವ ಅನ್ನದಾನೇಶ್ವರ ಡಾ. ಸಂಗನಬಸವ ಮಹಾಸ್ವಾಮೀಜಿಗೆ ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ  ಡಾ. ಶಾಮನೂರು ಶಿವಶಂಕರಪ್ಪ ಸಂತಾಪ ವ್ಯಕ್ತಪಡಿಸಿದ್ದಾರೆ.

ತಾಂಡಾ ರಕ್ಷಣಾ ವೇದಿಕೆಯ ಮಹಿಳಾ ಘಟಕದ ಅಧ್ಯಕ್ಷರಿಗೆ ಎಸ್ಸೆಸ್ ಅಭಿನಂದನೆ

ತಾಂಡಾ ರಕ್ಷಣಾ ವೇದಿಕೆಯ ಮಹಿಳಾ ಘಟಕದ ಅಧ್ಯಕ್ಷರಿಗೆ ಎಸ್ಸೆಸ್ ಅಭಿನಂದನೆ

ಕರ್ನಾಟಕ ತಾಂಡಾ ರಕ್ಷಣಾ ವೇದಿಕೆಯ ಮಹಿಳಾ ಘಟಕದ ರಾಜ್ಯ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಮತಿ ಕವಿತಾ ಚಂದ್ರಶೇಖರ್ ಅವರಿಗೆ ಶಾಸಕ ಡಾ. ಶಾಮನೂರು ಶಿವಶಂಕರಪ್ಪನವರು ಅಭಿನಂದಿಸಿದರು. 

ವೀರಶೈವ ಮಹಾಸಭಾದಿಂದ  ಸಂಗನಬಸವ ಶ್ರೀಗಳಿಗೆ ಶ್ರದ್ಧಾಂಜಲಿ

ವೀರಶೈವ ಮಹಾಸಭಾದಿಂದ ಸಂಗನಬಸವ ಶ್ರೀಗಳಿಗೆ ಶ್ರದ್ಧಾಂಜಲಿ

ಅಖಿಲ ಭಾರತ ವೀರಶೈವ-ಲಿಂಗಾಯಿತ ಮಹಾಸಭಾದ ದಾವಣಗೆರೆ ಜಿಲ್ಲಾ ಘಟಕದ ವತಿಯಿಂದ ಸೋಮವಾರ ಲಿಂಗೈಕ್ಯರಾದ ಹಾಲಕೆರೆ ಶ್ರೀ ಅನ್ನದಾನೇಶ್ವರ ಸಂಸ್ಥಾನ ಮಠದ ಡಾ. ಶ್ರೀ ಜಗದ್ಗುರು ಸಂಗನಬಸವ ಮಹಾಸ್ವಾಮಿಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು