ಓದುಗರ ಪತ್ರ

Home ಓದುಗರ ಪತ್ರ

ದಾವಣಗೆರೆ ಜಿಲ್ಲೆಯ ಕನಸಿನ ವೈದ್ಯಕೀಯ ಕಾಲೇಜು…

ಇತ್ತೀಚೆಗೆ ದಾವಣಗೆರೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಬಹಳ ಸುದ್ದಿಯಲ್ಲಿದೆ. ಎನ್‌ಎಂಸಿ (ಎಂಸಿಟಿ) ನಮ್ಮ ದೇಶದ ವೈದ್ಯಕೀಯ ಕಾಲೇಜು ಸ್ಥಾಪನೆಗಳ ಬಗ್ಗೆ ಕೆಲವು ಮಾನದಂಡ ರೂಪಿಸಿದೆ.

ಯೂರಿಯಾ ರಸಗೊಬ್ಬರ ಕಾರ್ಖಾನೆ ಸಂಸದರ ಸುಳ್ಳುಗಳ ಸರಮಾಲೆ

ನಾಲ್ಕು ಬಾರಿ ದಾವಣಗೆರೆ ಸಂಸದರಾಗಿರುವ ಜಿ.ಎಂ.ಸಿದ್ದೇಶ್ವರ ಅವರು ಜಿಲ್ಲೆಗೆ ಕೇಂದ್ರದಿಂದ ಯಾವುದೇ ಹೊಸ ಕಾರ್ಖಾನೆಗಳನ್ನು ಸ್ಥಾಪಿಸಿ, ಉದ್ಯೋಗ ಸೃಷ್ಟಿ ಮಾಡದೇ ಕೇವಲ ಆಶ್ವಾಸನೆಗಳಲ್ಲೇ ತಮ್ಮ ಅಧಿಕಾರವಧಿಯನ್ನು ಸವೆಸುತ್ತಿದ್ದಾರೆ.

ವಿನೋಬನಗರದಲ್ಲಿ ಎಲ್ಲೆಂದರಲ್ಲಿ ಕಸ, ಹಂದಿಗಳ ಹಾವಳಿ

ವಿನೋಬನಗರದಲ್ಲಿ ಎಲ್ಲೆಂದರಲ್ಲಿ ಕಸ, ಹಂದಿಗಳ ಹಾವಳಿ

ದಾವಣಗೆರೆ ನಗರದಲ್ಲಿ ಸ್ಮಾರ್ಟ್ ಸಿಟಿ ಹೆಸರಿಗಷ್ಟೇ ಆಗಿದೆ ? ಅಧಿಕಾರಿಗಳ ನಿರ್ಲಕ್ಷ್ಯದಿಂದ ವಿನೋಬನಗರದ 1ನೇ ಮೇನ್, 11ನೇ ಕ್ರಾಸ್‌ನಲ್ಲಿ ನಾಗರಿಕರು ಎಲ್ಲೆಂದರಲ್ಲಿ ಕಸದ ರಾಶಿಯನ್ನು ತಂದು ರಸ್ತೆ ಹಾಗೂ ಚರಂಡಿಯಲ್ಲಿ ಹಾಕುತ್ತಾರೆ.

ಮೀಟರ್ ಬೋರ್ಡ್‍ಗೆ ಸೂಕ್ತ ಸ್ಥಳ ಕಲ್ಪಿಸಿ

ಎಸ್. ಎಸ್. ಲೇ ಔಟ್ `ಬಿ' ಬ್ಲಾಕ್ ನ ಬಾಲಾಜಿ ನಗರದ  ನೂತನ ಡಬಲ್ ರೋಡ್ ಪಕ್ಕದಲ್ಲಿ ಮೀಟರ್ ಬೋರ್ಡ್ ಇದಾಗಿದೆ. ಇದನ್ನು ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸುವ ಅಗತ್ಯತೆ ಇದೆ.

ಕೊರೊನಾ : ಹೆಚ್ಚುವರಿ ಬಸ್ ಬಿಡಲಿ

ಪ್ರಸ್ತುತ ಅನ್‍ಲಾಕ್ ಒಂದರ ಅಡಿಯಲ್ಲಿ ಕೆಲವೇ ಕೆಲವು ಸಾರಿಗೆ ಬಸ್ ಗಳನ್ನು ಬಿಟ್ಟಿದ್ದು, ಪ್ರಯಾಣಿಕರ ಸಂ ಖ್ಯೆಯು ಹೆಚ್ಚಾಗಿರುವು ದರಿಂದ  ಬಸ್ ಗಳಲ್ಲಿ ಸಾಮಾಜಿಕ ಅಂತರದ ಪರಿಪಾಲನೆಯಾಗುತ್ತಿಲ್ಲ.

ಎಸ್ಸೆಸ್ಸೆಲ್ಸಿ ಪರೀಕ್ಷೆ : ಗಣಿತ ಸವಾಲು

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಗಣಿತ ಶಿಕ್ಷಕರಾದ ನಾವು ಇದುವರೆಗೂ ಬಹು ಆಯ್ಕೆ ಪ್ರಶ್ನೆಗಳಿಗೆ ಹೆಚ್ಚಿನ ಒತ್ತು ಕೊಟ್ಟಿರಲಿಲ್ಲ. ಯಾಕೆಂದರೆ ಪ್ರಸಕ್ತ ಮಾದರಿ ಪ್ರಶ್ನೆಪತ್ರಿಕೆಯಲ್ಲಿ ಕೇವಲ 8 ಬಹು ಆಯ್ಕೆಯ ಪ್ರಶ್ನೆಗಳು ಇತ್ತು.

ಬ್ಯಾಂಕ್‌/ಎಂಟಿಎಂಗಳಲ್ಲಿ ಬಿಡಿ ನೋಟು ಸಿಗಲಿ

ಕೊರೊನಾ ಸೋಂಕನ್ನು ತಡೆಯುವ ನಿಟ್ಟಿನಲ್ಲಿ  ಜೂನ್ 5ರ ವರೆಗೆ ಬ್ಯಾಂಕಿನ ಸಮಯವನ್ನು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಬದಲಾವಣೆ ಮಾಡುವುದರಿಂದ  (ತಿಂಗಳ ಮೊದಲ ವಾರದ ಜನದಟ್ಟನೆ ತಪ್ಪಿಸಲು) ಗ್ರಾಹಕರಿಗೆ ಅನುಕೂಲವಾಗುವುದು. 

ಹುಡುಕಿ ಕೊಡಿ ಮಾಯಕೊಂಡ ಕ್ಷೇತ್ರದ ಮಾಜಿ, ಹಾಲಿ, ಭಾವೀ ಜನಪ್ರತಿನಿಧಿಗಳನ್ನ !

ಮಾಯಕೊಂಡ ಕ್ಷೇತ್ರದ ಜನಪ್ರತಿನಿಧಿಗಳೇ ಎಲ್ಲಿ ಕಾಣೆಯಾಗಿದ್ದೀರಾ? ನಿಮ್ಮ ಕ್ಷೇತ್ರದ ಅನೇಕ ಹಳ್ಳಿಗಳು ಕೊರೊನಾಕ್ಕೆ ಒಳಗಾಗ್ತಿವೆ. ಅನೇಕ ಜನರು ರೋಗಗ್ರಸ್ಥರಾಗ್ತಿದ್ದಾರೆ. ಕೆಲ ಕುಟುಂಬಗಳು ಬೀದಿಗೆ ಬಿದ್ದಿವೆ. ಇವೆಲ್ಲಾ ತಮಗೆ ತಿಳಿಯುತ್ತಿಲ್ಲವೇ?

ಹೊಟ್ಟೆಗೆ ಹಿಟ್ಟಿಲ್ಲದಾಗ ಸಹಕಾರಿಗಳಿಗೆ ದಾನದ ಜುಟ್ಟು ಬೇಕೇ ?

ಜಿಲ್ಲಾ ಸಹಕಾರ ಬ್ಯಾಂಕುಗಳು ಜಿಲ್ಲಾಡಳಿತಕ್ಕೆ 30 ಲಕ್ಷ ರೂ.ಗಳ ಆಕ್ಸಿಜನ್ ಉತ್ಪಾದನಾ ಘಟಕ ಸ್ಥಾಪಿಸಲು ದಾನ ನೀಡಿವೆ ಎಂಬ ಸುದ್ದಿ ವರದಿಯಾಗಿದೆ. ಕೊರೊನಾದ ಸಂದರ್ಭದಲ್ಲಿ ಇಂತಹ ಕ್ರಮ ಒಳ್ಳೆಯದೇ.

ದಾವಣಗೆರೆಯಲ್ಲಿ ವ್ಯಾಕ್ಸಿನ್ ಹಾಹಾಕಾರ…!

ಕಳೆದ ವರ್ಷದ ಕೊರೊನಾ ಮಹಾಮಾರಿ ಬೆಂಬಿಡದ ಭೂತವಾಗಿ ಫೆಬ್ರವರಿಯಲ್ಲಿ ಆರಂಭವಾ ದಾಗ ಲಸಿಕೆಯನ್ನು ಪಡೆಯಲು ಹಿಂದು..ಮುಂದು ಮಾಡಿದವರು ಈಗ ಲಸಿಕೆಯನ್ನು ಪಡೆಯಲು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುವ ಉದ್ವಿಗ್ನತೆ ಸಾಮಾನ್ಯ ಜನರಲ್ಲಿ ಹೆಚ್ಚಾಗಿದೆ.

ಆತ್ಮವಿಶ್ವಾಸವೊಂದಿದ್ದರೆ ಎಂತಹ ಕಾಯಿಲೆಯನ್ನಾದರೂ ಗೆಲ್ಲಬಹುದು

ಆರೋಗ್ಯ ಸಂಪತ್ತೊಂದಿದ್ದರೆ ಉಳಿದೆಲ್ಲ ಸಂಪತ್ತನ್ನೂ ಪಡೆಯ ಬಹುದು.  ದೇಶದಲ್ಲಿ ಹಬ್ಬುತ್ತಿರುವ ಮಹಾ ಮಾರಿ ಕೊರೊನಾ 2ನೇ ಅಲೆ  ಜನರಲ್ಲಿ ಆತಂಕ ಮತ್ತು ಭಯ ಹುಟ್ಟಿಸಿದೆ. ಈ ಅಲೆಯು ಎಲ್ಲಿಯವರೆಗೆ ಇರುವುದೋ ಗೊತ್ತಿಲ್ಲ.

ಶಿಥಿಲಾವಸ್ಥೆ ತಲುಪಿದ ವಾಹನವನ್ನು ಪುನಶ್ಚೇತನಗೊಳಿಸಿ

ಪ್ರಸ್ತುತ ಸಂದರ್ಭದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಹಲವಾರು ಜನರು ಸಾಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಶವ ಸಾಗಾಟ ಮಾಡಲು ಸಂಬಂಧಿಕರು ಅಲೆದಾಡುವ ಸ್ಥಿತಿ ಉಂಟಾಗಿದೆ.