ಚಳಿಗಾಲ ಕಳೆದು ಬೇಸಿಗೆ ಕಾಲ ಆರಂಭವಾಗಿದೆ. ಆರಂಭದಲ್ಲಿಯೇ ಬಿಸಿಲ ಬೇಸಿಗೆಗೆ ಜನರು ಉಸ್ಸಪ್ಪಾ ಎನ್ನುತ್ತಿದ್ದಾರೆ. ಬಡವರ ಫ್ರಿಡ್ಜ್ ಎಂದೇ ಹೇಳಲಾಗುವ ಮಡಿಕೆಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ.

ಸಾರ್ವಜನಿಕ ದೂರುಗಳಿಗೆ `ಪರಿಹಾರ’
ವಾರದ ನಾಲ್ಕು ದಿನಗಳಲ್ಲಿ ಪ್ರತಿ ವಾರ್ಡ್ಗೂ ಆಯುಕ್ತರು ಹಾಗೂ ಅಧಿಕಾರಿಗಳೊಂದಿಗೆ ಭೇಟಿ ನೀಡುವುದಾಗಿ ಮೇಯರ್ ಎಸ್.ಟಿ. ವೀರೇಶ್ ಹೇಳಿದರು.

ಮಹಾಪೌರರು ಕನ್ನಡಿಗರ ಧ್ವನಿಯಾಗಿ ನಿಲ್ಲಲಿ
ಕನ್ನಡ ಪರವಾದ ನಿಲುವುಗಳನ್ನು ತೆಗೆದುಕೊಳ್ಳುವ ಜೊತೆಗೆ ಕನ್ನಡಿಗರ ಧ್ವನಿಯಾಗಿ ನಿಲ್ಲುವಂತೆ ಕರವೇ ಜಿಲ್ಲಾಧ್ಯಕ್ಷ ಎಂ.ಎಸ್. ರಾಮೇಗೌಡ ಅವರು ನೂತನ ಮೇಯರ್ ವೀರೇಶ್ ಅವರನ್ನು ವಿನಂತಿ ಮಾಡಿಕೊಂಡರು.

ಮಡಿವಾಳ ಸಮುದಾಯ ಪರಿಶಿಷ್ಟ ಜಾತಿ ಪಟ್ಟಿಗೆ ಸೇರಲಿದೆ
ಮಡಿವಾಳ ಸಮುದಾಯವನ್ನು ಎಸ್ಸಿ ಪಟ್ಟಿಗೆ ಸೇರಿಸುವ ನಿಟ್ಟಿನಲ್ಲಿ ಅತ್ಯಂತ ಜಾಣ್ಮೆ, ತಂತ್ರಜ್ಞಾನದಿಂದ, ವ್ಯವಸ್ಥಿತವಾಗಿ ನಾವುಗಳು ರಾಜಕೀಯ ಲಾಬಿ ನಡೆಸಿ ಪಡೆದುಕೊಳ್ಳಬೇಕಾಗುತ್ತದೆ.

ಆಳವಾದ ಅಧ್ಯಯನದಿಂದ ಭವಿಷ್ಯದ ದಾರಿ ಸಿದ್ಧಿಸಲಿದೆ
ಯಶಸ್ಸು ಕಾಣಲು ಎಲ್ಲಾ ಕ್ಷೇತ್ರ ಗಳಲ್ಲೂ ಅವಕಾಶಗಳಿದ್ದರೂ ನಿರ್ದಿಷ್ಟವಾಗಿ ಒಂದೇ ಕ್ಷೇತ್ರದಲ್ಲಿ ಆಳವಾದ ಅಧ್ಯಯನ ಮತ್ತು ಶ್ರಮ ವಹಿಸಿದರೆ ಗಾಢವಾದ ಜಾನ ಸಂಪಾದಿಸಿ ಪರಿಪೂರ್ಣ ಸಾಧನೆ ಮಾಡಲು ಸಾಧ್ಯವಾಗುತ್ತದೆ
27ರಂದು ಲೋಕ್ ಅದಾಲತ್
ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಸುಲಭ, ಶೀಘ್ರ ಹಾಗೂ ಶುಲ್ಕವಿಲ್ಲದೇ ಇತ್ಯರ್ಥಪಡಿಸಿಕೊಳ್ಳಲು ನಡೆಸಲಾಗುವ ಬೃಹತ್ ಲೋಕ್ ಅದಾಲತ್ ಮಾರ್ಚ್ 27ರ ಶನಿವಾರದಂದು ನಡೆಯಲಿದೆ
ಅಕ್ರಮ ಕಲ್ಲು ಕ್ವಾರಿ ಮೇಲೆ ದಾಳಿ ಸ್ಪೋಟಕ ವಸ್ತುಗಳ ಜಪ್ತು
ಅಕ್ರಮ ಕಲ್ಲು ಕ್ವಾರಿ ಮೇಲೆ ದಾಳಿ ನಡೆಸಿರುವ ಮಾಯಕೊಂಡ ಪೊಲೀಸರು ಓರ್ವನ ಬಂಧಿಸಿ, ಸ್ಫೋಟಕ ವಸ್ತುಗಳು ಸೇರಿದಂತೆ 1 ಲಕ್ಷದ 15 ಸಾವಿರದ 934 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಗುರುಗಳೇ ವಿದ್ಯಾರ್ಥಿಗಳಿಗೆ ಹೆದರುವ ಪರಿಸ್ಥಿತಿ ನಿರ್ಮಾಣ
ಶಿಕ್ಷಣ ನೀಡುವ ಗುರುಗಳೇ ವಿದ್ಯಾರ್ಥಿಗಳಿಗೆ ಸರ್ಕಾರದ ಶಿಕ್ಷಣ ಸುಧಾರಣಾ ನೀತಿಯಿಂದಾಗಿ ಹೆದರಿ ಪಾಠ ಹೇಳಿಕೊಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದಯಾಮರಣ ಕಾನೂನು ಜಾರಿಗೆ ಶ್ರಮಿಸಿದ ಹೋರಾಟಗಾರ್ತಿ ಮತ್ತು ಹೊಂಡದ ರಸ್ತೆ ಶಾಲೆಯ ವಿಶ್ರಾಂತ ಶಿಕ್ಷಕಿ ಹೆಚ್.ಬಿ. ಕರಿಬಸಮ್ಮ ಖೇದ ವ್ಯಕ್ತಪಡಿಸಿದರು.
ವಂಚನೆ ಪ್ರಕರಣ: ಕೋಳಿ ಸಾಕಾಣಿಕೆದಾರರ ಮನವಿ
ಶ್ರೀ ವೆಂಕಟೇಶ್ವರ ಹ್ಯಾಚರೀಸ್ ಕಂಪನಿಗೆ ಜಗಳೂರು ತಾಲ್ಲೂಕಿನ ಗೋಗುದ್ದು ಗ್ರಾಮದವರಾದ ನಿಜಾಮುದ್ದೀನ್ ಮತ್ತವರ ಸಹೋದರ ತಾಜುದ್ದೀನ್ ಎಂಬುವವರು ನಿಯಮಾವಳಿ ಪ್ರಕಾರ ಕೋಳಿಗಳನ್ನು ನೀಡದೆ ಬೇರೆಯವರಿಗೆ ಮಾರಾಟ ಮಾಡಿ ಕಂಪನಿಗೆ ದ್ರೋಹ ಬಗೆದಿದೆ.
ಪಂಚಮಸಾಲಿ ಸಮಾಜಕ್ಕೆ 2 ‘ಎ’ ಮೀಸಲಾತಿಗಾಗಿ ಹಕ್ಕೊತ್ತಾಯ ಚಳುವಳಿ
ವೀರಶೈವ ಲಿಂಗಾಯತ ಪಂಚಮಸಾಲಿಗಳಿಗೆ 2 ‘ಎ’ ಮೀಸಲಾತಿಗೆ ಆಗ್ರಹಿಸಿ ಪಂಚಮಸಾಲಿ ಸಮಾಜದ 2ಎ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾ ಘಟಕದಿಂದ ಹಕ್ಕೊತ್ತಾಯ ಚಳುವಳಿ ನಿನ್ನೆ ನಗರದಲ್ಲಿ ನಡೆಯಿತು.
ನೀರಿನ ಕಂದಾಯ ವಸೂಲಿಗಿಳಿದ ಪಾಲಿಕೆ
ಕಂದಾಯ ವಸೂಲಿ ಕಾರ್ಯಾಚರಣೆ ನಡೆಸಿದ ಪಾಲಿಕೆ ಆಯುಕ್ತ ವಿಶ್ವನಾಥ ಪಿ. ಮುದಜ್ಜಿ ನೇತೃತ್ವದ ತಂಡವು ನೀರಿನ ಕಂದಾಯವನ್ನು ಬಾಕಿ ಉಳಿಸಿಕೊಂಡಿದ್ದ ನಗರ ಪಾಲಿಕೆಯ ವ್ಯಾಪ್ತಿಯಲ್ಲಿನ ಹೋಟೆಲ್, ಲಾಡ್ಜ್ಗಳಿಂದ ನೀರಿನ ಕಂದಾಯ ವಸೂಲಿ ಮಾಡಿತು.
ದಾರಿ ತೋರಿಸಬೇಕಾದ ಸಂತರೇ ದಾರಿ ತಪ್ಪುತ್ತಿದ್ದಾರೆ
ಕತ್ತಲೆಯ ಜಗತ್ತಿಗೆ ದಾರಿ ತೋರಿಸಬೇಕಾದ ಸಂತರೇ ಇಂದು ದಾರಿ ತಪ್ಪುತ್ತಿದ್ದಾರೆ. ತಾವು ಮಾಡಬೇಕಾದ ಕಾರ್ಯಗಳ ಬದಲಿಗೆ ಮತ್ತೇನನ್ನೋ ಮಾಡುತ್ತಿದ್ದಾರೆ ಎಂದು ಜಾನಪದ ತಜ್ಞ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಎಂ.ಜಿ.ಈಶ್ವರಪ್ಪ ಹೇಳಿದರು.
ಭಾರತದ ಸಂಸ್ಕೃತಿ ಉಳಿದಿರುವುದೇ ಕಲೆಗಳಿಂದ
ನಮ್ಮ ಕಲೆಗಳಿಂದ ಮತ್ತು ಕಲಾವಿದರಿಂದ. ದೇವತಾ ಸಂಸ್ಕೃತಿಯನ್ನು ಹೊಂದಿರುವ ನಮ್ಮ ದೇಶ ತಪಸ್ವಿಗಳು ಹಾಗೂ ಮಹಾತ್ಮರು ತಪಸ್ಸನ್ನು ಮಾಡಿದ ಪವಿತ್ರವಾದ ತಪೋ ಭೂಮಿ ಎಂದು ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕರಾದ ಲೀಲಾಜಿ ತಿಳಿಸಿದರು
ವಿಜಾನ-ತಂತ್ರಜಾನ ಕ್ಷೇತ್ರದಲ್ಲಿ ಉತ್ತಮ ಕೊಡುಗೆ ನೀಡಿ
ವಿಜ್ಞಾನದ ಮಹತ್ವವನ್ನು ಅರಿತುಕೊಳ್ಳುವ ಜೊತೆಗೆ ತಂತ್ರಜಾನದ ಪ್ರಯೋಜನಗಳನ್ನು ಸದ್ಬಳಕೆ ಮಾಡಿಕೊಂಡು ವಿಜಾನ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುವತ್ತ ಹೆಚ್ಚು ಒತ್ತು ನೀಡುವಂತೆ ದಾವಣಗೆರೆ ವಿಶ್ವವಿದ್ಯಾಲಯದ ಆಡಳಿತ ಕುಲಸಚಿವರಾದ ಪ್ರೊ. ಗಾಯತ್ರಿ ದೇವರಾಜು ವಿಜಾನ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಸರ್ಕಾರಕ್ಕೆ ಸಾಲ ನೀಡುವ ಕನಸು ಕಾಣಿರಿ
ಕನಸಿಗೆ ಮಿತಿ ಇಲ್ಲ, ಕನಸಿಗೆ ಶುಲ್ಕವಿಲ್ಲ, ಕನಸಿ ಗೆ ಮೀಸಲಾತಿ ಇಲ್ಲ. ಕನಸುಗಳು ಸಾಕಾರಗೊಳ್ಳದೇ ಇರುವುದಿಲ್ಲ. ಹೀಗಾಗಿ ಕನಸು ಕಾಣಲು ಹಿಂಜರಿ ಯಬಾರದು, ದೊಡ್ಡ ಕನಸುಗಳನ್ನೇ ಕಾಣಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದ್ದಾರೆ.
ವೀರಭದ್ರೇಶ್ವರನ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಓಂಕಾರ ಶ್ರೀಗಳ ಕರೆ
ದುಷ್ಟರ ಶಿಕ್ಷಕ, ಶಿಷ್ಟ ಪರಿಪಾಲಕ ಶ್ರೀ ವೀರ ಭದ್ರೇಶ್ವರನ ಆದರ್ಶಗಳನ್ನು ಜೀವನ ದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಉತ್ತಮ ಸಮಾಜ ನಿರ್ಮಾಣದತ್ತ ಸಾಗಬೇಕೆಂದು ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಕರೆ ನೀಡಿದರು.
ಟಿವಿ, ಚಿತ್ರರಂಗದ ಹಾವಳಿಯಲ್ಲಿಯೂ ರಂಗಭೂಮಿ ಇನ್ನೂ ಜೀವಂತ
ರಂಗಭೂಮಿಯಿಂದ ಚಿತ್ರರಂಗಕ್ಕೆ ಹೋಗಿರುವ ಅನೇಕ ನಟ-ನಟಿಯರು ರಂಗಭೂಮಿಯನ್ನೇ ಮರೆತಿದ್ದಾರೆ ಎಂದು ಯುವ ಮುಖಂಡ ಬಾಡದ ಆನಂದರಾಜ್ ಅವರು ಅಸಮಾಧಾನ ವ್ಯಕ್ತಪಡಿಸಿದರು.
ದರ್ಗಾ ಕಾಣಿಕೆ ಹುಂಡಿಗೆ ಬೆಂಕಿ : ಕರಕಲಾದ ಲಕ್ಷಾಂತರ ರೂ.
ಕಾಣಿಕೆ ಹುಂಡಿಗೆ ಬೆಂಕಿ ಬಿದ್ದು ಅದರಲ್ಲಿದ್ದ ಲಕ್ಷಾಂತರ ರೂ. ಮುಖ ಬೆಲೆಯ ನೋಟುಗಳು ಸುಟ್ಟು ಕರಕಲಾಗಿರುವ ಘಟನೆ ತಾಲ್ಲೂಕಿನ ದೊಡ್ಡಬಾತಿ ಗ್ರಾಮದ ದರ್ಗಾದಲ್ಲಿ ಸಂಭವಿಸಿದೆ.
ರೈತರನ್ನು ಕೃಷಿಯಿಂದಲೇ ವಿಮುಖರಾಗಿಸುವ ಕರಾಳ ಕಾಯ್ದೆ
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ತಿದ್ದುಪಡಿ ಕಾಯ್ದೆಗಳು ಮೇಲ್ನೋಟಕ್ಕೆ ರೈತರ ಪರ ಎಂದು ಭಾವಿಸಿದರೂ ಕರಾಳ ಅಂಶಗಳನ್ನು ಒಳಗೊಂಡಿದ್ದು, ಈ ಕಾಯ್ದೆಗಳಿಂದ ರೈತರ ಆದಾಯ ದ್ವಿಗುಣಗೊಳ್ಳುವ ಬದಲಿಗೆ ಕೃಷಿಯಿಂದಲೇ ಸಂಪೂರ್ಣ ವಿಮುಖರಾಗಬೇಕಾಗಲಿದೆ
ದಾವಣಗೆರೆ ಕೀರ್ತಿಯನ್ನು ಜಗತ್ತಿಗೇ ಪರಿಚಯಿಸಿದವರು ಹರ್ಡೇಕರ್ ಮಂಜಪ್ಪ
ಕರ್ನಾಟಕದ ಮೊಟ್ಟ ಮೊದಲ ಆಧುನಿಕ ವಚನ ಕಾರರಾಗಿ ನೂರಾರು ಪುಸ್ತ ಕಗಳನ್ನು ರಚಿಸಿ ದಾವ ಣಗೆರೆ ಕೀರ್ತಿಯನ್ನು ಜಗತ್ತಿಗೆ ಪರಿಚ ಯಿಸಿದವರು ಹರ್ಡೇಕರ್ ಮಂಜಪ್ಪನವರು.
ಭರಮಸಾಗರ : 40 ಕೆರೆಗಳಿಗೆ ನೀರು
ಭರಮಸಾಗರ : ಐತಿಹಾಸಿಕ ಭರಮಸಾಗರದಲ್ಲಿನ ದೊಡ್ಡಕೆರೆ, ಸಣ್ಣಕೆರೆ, ಎಮ್ಮೆಹಟ್ಟಿ ಕೆರೆಗಳ ಹೂಳು ತೆಗೆಸಿ ಅಭಿವೃದ್ಧಿ ಪಡಿಸಿ, ಈ ವ್ಯಾಪ್ತಿಯ ಸುಮಾರು 40 ಕೆರೆಗಳಿಗೆ ನೀರು ತುಂಬಿಸಲಾಗುವುದು ಎಂದು ಕ್ಷೇತ್ರದ ಶಾಸಕ ಎಂ. ಚಂದ್ರಪ್ಪ ತಿಳಿಸಿದರು.
ಕೆಲಸಗಾರರು ಬೇಕಾಗಿದ್ದಾರೆ
ಏರ್ಟೆಲ್ ಕಂಪನಿಯಲ್ಲಿ ಕೆಲಸ ಮಾಡಲು ಪ್ರಮೋಟರ್ಸ್ಸ್ ಬೇಕಾಗಿದ್ದಾರೆ. ಆಕರ್ಷಕ ಸಂಬಳ 10,000 + Incentive
ಬೆಣ್ಣೆ ದೋಸೆ ಭಟ್ಟರು ಬೇಕಾಗಿದ್ದಾರೆ
ಬಳ್ಳಾರಿಯಲ್ಲಿರುವ ನಮ್ಮ ಹೋಟೆಲ್ಗೆ ಬೆಣ್ಣೆ, ಖಾಲಿ ದೋಸೆ ಹಾಕಲು ಭಟ್ಟರು ಬೇಕಾಗಿದ್ದಾರೆ. ಒಳ್ಳೆಯ ಸಂಬಳ ಸಿಗುತ್ತದೆ, ಉಚಿತ ಊಟ & ವಸತಿ ಸಿಗುತ್ತದೆ.
ರಾಮಗಿರಿ ಎ.ಕರಿಸಿದ್ದಪ್ಪ
ದಾವಣಗೆರೆ ವಿದ್ಯಾನಗರ 13ನೇ ಕ್ರಾಸ್ ವಾಸಿ, ಹೊಳಲ್ಕೆರೆ ತಾಲ್ಲೂಕು ರಾಮಗಿರಿಯ ಎ.ಕರಿಸಿದ್ದಪ್ಪ (78) ಇವರು ದಿನಾಂಕ 5.03.2021ರ ಶುಕ್ರವಾರ ರಾತ್ರಿ 8.20ಕ್ಕೆ ನಿಧನರಾದರು.
ಸಂಗಮ್ಮ ಬೆಲವಂತರ ಕಂಠಿ
ದಾವಣಗೆರೆ ನಿಟ್ಟುವಳ್ಳಿ ಮೌನೇಶ್ವರ ಬಡಾವಣೆ ಮಹೇಶ್ವರಿ ಸ್ಕೂಲ್ ಹಿಂಭಾಗದ ವಾಸಿ ದಿ.ಈಶ್ವರಯ್ಯ ಇವರ ಧರ್ಮಪತ್ನಿ ಸಂಗಮ್ಮ ಬೆಲವಂತರ ಕಂಠಿ ಬಂಗಾರಗುಂಡ (98) ಇವರು ದಿನಾಂಕ 5.03.2021 ರ ಶುಕ್ರವಾರ ರಾತ್ರಿ 9.30ಕ್ಕೆ ನಿಧನರಾದರು.
ನಿಂಗಪ್ಪ ರಾಮಣ್ಣ ಬ್ಯಾಡಗಿ
ದಾವಣಗೆರೆ ಬೇತೂರು ರಸ್ತೆ ಅರಳಿಮರ ಹತ್ತಿರದ ವಾಸಿ ನಿಂಗಪ್ಪ ರಾಮಣ್ಣ ಬ್ಯಾಡಗಿ (64) ಇವರು ದಿನಾಂಕ 5.03.2021ರ ಶುಕ್ರವಾರ ಸಂಜೆ 4 ಗಂಟೆಗೆ ನಿಧನರಾದರು.
ಮಡಿವಾಳರ ಗುಡ್ಡಪ್ಪ
ದಾವಣಗೆರೆ ಸರಸ್ವತಿ ಬಡಾವಣೆ ಕೊನೆ ಬಸ್ ಸ್ಟಾಪ್ ಹತ್ತಿರದ ವಾಸಿ ಮಡಿವಾಳರ ಗುಡ್ಡಪ್ಪ (64) ಇವರು ದಿನಾಂಕ 4.03.2021 ರ ಗುರುವಾರ ಮಧ್ಯಾಹ್ನ 2.30ಕ್ಕೆ ನಿಧನರಾದರು.
ಕೂಡ್ಲಿಗಿ : ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ
ಕೂಡ್ಲಿಗಿ : ಎರಡು ಕಾಲುಗಳನ್ನು ಕಟ್ಟಿ, ನೇಣು ಬಿಗಿದ ಸ್ಥಿತಿಯಲ್ಲಿ ಶವವೊಂದು ಕೂಡ್ಲಿಗಿ ಸಮೀಪದ ಮೊರಬನಹಳ್ಳಿ ಹೊರವಲಯದಲ್ಲಿ ಪತ್ತೆಯಾಗಿರುವ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದ್ದು, ಕೂಡ್ಲಿಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗಾಂಜಾ ಮಾರಾಟ : ನಾಲ್ವರ ಬಂಧನ
ಗಾಂಜಾ ಮಾರಾಟದ ವೇಳೆ ದಾಳಿ ನಡೆಸಿರುವ ಕೆಟಿಜೆ ನಗರ ಪೊಲೀಸರು ನಾಲ್ವರನ್ನು ಬಂಧಿಸಿ, 40 ಸಾವಿರ ಮೌಲ್ಯದ 1 ಕೆಜಿ ಗಿಂತಲೂ ಹೆಚ್ಚಿನ ಗಾಂಜಾ ಹಾಗೂ 2 ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ.
ನೆಲಮಂಗಲ ಸಾರಿಗೆ ಇಲಾಖೆ ಜೀಪ್ ಚಾಲಕನ ಕಿರುಕುಳ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಸಾರಿಗೆ ಕಚೇರಿಯ ಜೀಪ್ ಚಾಲಕ ನಾಗಪ್ಪನ ವಿರುದ್ಧ ಸಾಕಷ್ಟು ದೂರುಗಳಿದ್ದು, ಈತನು ಸಾರಿಗೆ ವಾಹನಗಳ ಚಾಲಕರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಕಿರುಕುಳ ನೀಡುತ್ತಿದ್ದಾರೆ
ಗಾಂಜಾ ಮತ್ತಲ್ಲಿ ದರೋಡೆಗೆ ಯತ್ನ: ಇಬ್ಬರ ಬಂಧನ
ಗಾಂಜಾ ಮತ್ತಿನಲ್ಲಿ ಸಾರ್ವಜನಿಕರಿಗೆ ಚಾಕುಗಳನ್ನು ತೋರಿಸಿ ಹಣ ಮತ್ತು ಚಿನ್ನಾಭರಣ ದರೋಡೆ ಮಾಡಲು ಹೊಂಚು ಹಾಕುತ್ತಿದ್ದ ಇಬ್ಬರು ದರೋಡೆಕೋರರನ್ನು ಹೊನ್ನಾಳಿ ಪೋಲಿಸರು ಬಂಧಿಸಿದ್ದಾರೆ.
ಬಸ್ ಹರಿದು ಬಾಲಕಿ ಸಾವು
ಸರ್ಕಾರಿ ಬಸ್ ಹರಿದ ಪರಿಣಾಮ ತಂದೆಯೊಡನೆ ರಸ್ತೆ ದಾಟುತ್ತಿದ್ದ ಬಾಲಕಿಯೋರ್ವಳು ಭೀಕರ ವಾಗಿ ಸಾವನ್ನಪ್ಪಿರುವ ಘಟನೆ ಗುತ್ತೂರಿನ ಹರಿಹರ-ಹರಪನ ಹಳ್ಳಿ ರಸ್ತೆಯಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ.
ಮನೆಗಳ್ಳತನ: ಚಿನ್ನಾಭರಣ, ನಗದು ಕಳವು
ಮನೆಗೆ ಕನ್ನ ಹಾಕಿರುವ ಕಳ್ಳರು 50 ಸಾವಿರ ಮೌಲ್ಯದ ಬೆಳ್ಳಿ, 30 ಸಾವಿರ ಮೌಲ್ಯದ ಬಂಗಾರದ ಕೊರಳ ಚೈನ್, 40 ಸಾವಿರ ನಗದು ಕಳವು ಮಾಡಿರುವ ಘಟನೆ ಚನ್ನಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಚನ್ನಗಿರಿ ತಾಲ್ಲೂಕು ಲಿಂಗದಹಳ್ಳಿ ಗ್ರಾಮದಲ್ಲಿ ನಡೆದಿದೆ.
ಅನ್ನದಾತ-ಜೀವದಾತ
ರೈತನ ತಾಳ್ಮೆಯಕಟ್ಟೆ ಹೊಡೆದರೆ, ಭೂ ತೆರೆದಂತೆ...ಭೂ ಕಂಪಿಸಲಿ, ತನ್ನ ಗರ್ಭದ ಜ್ವಾಲೆಯಲಿ...
ಓ… ವ್ಯಾಮೋಹದ ಕಾರ್ಮೋಡವೇ…
ಓ...ವ್ಯಾಮೋಹದ ಕಾರ್ಮೋಡವೇ...ಬಿರುಮಳೆಯಾಗಿ ಸುರಿಯದಿರು...ಕೊಚ್ಚಿ ಹೋಗದಿರಲಿ ಕನಸುಗಳ ಸಸಿಮಡಿ
ಇರು ನೀ ಇರು….
ಕೂಗಿದವನ ಸಹಾಯಕ್ಕೆ ಹಸ್ತವ ಚಾಚಲು ಮರೆಯದಿರು, ಬೋಗ ಭಾಗ್ಯಗಳ ಬಿರುಗಾಳಿಗೆ ಮೈಮರೆತು ಸಿಲುಕದಿರು,
ಭಾರತವಿದು `ಸಾರ್ವಭೌಮ ಗಣರಾಜ್ಯ’
ಜಾರಿಗೆ ಬಂತಿದು 1950ರ ಜನವರಿ ಇಪ್ಪತ್ತಾರಕೆ ಮೆರೆದಿದೆ ವಿಶ್ವದೆಲ್ಲೆಡೆ ಭಾರತದ ಕೀರ್ತಿ ಪತಾಕೆ
ನಮ್ಮನೆ ದೇವರು
ನಮಗೆ ಕೊಡುವಾಗ ಜನ್ಮ...ಪಡೆದಳಾಕೆ ಮರುಜನ್ಮ...ಹುಟ್ಟಿಬಂದರೂ ನೂರಾರು ಜನ್ಮ...ಮಾತೃಋಣ ತೀರಿಸಲಾಗದ್ದು ನಮ್ಮ ಕರ್ಮ
ಒಲವಿನ ಕಾಯಕ
ಹಾರುವ ಹಕ್ಕಿಸಾಲಂತೆ ತೋರುತ, ಕೆಸರ ಗದ್ದೆಯಲಿ ಕಚ್ಚೆದಿರುಸಲಿ ಕಾಯಕದಿ ನಿರತ ಹೆಂಗಳೆಯರ ಸಂತಸಕೆ ಎಣೆಯಿಲ್ಲ.
`ನಗುವಿರಲಿ ಎಂದೆಂದೂ’…
ನಕ್ಕು ನಗಿಸುತಲಿರಿ `ವಿಶ್ವ ನಗು ದಿನ'ವಿಂದು, ಇಂದೊಂದೇ ದಿನವಲ್ಲ, ನಗುವಿರಲಿ ಎಂದೆಂದೂ.
ಒಡನಾಡಿಗಳು …
ಕಂಡು ಕಾಣದ ಹಾಗೆ ಬೀದಿಗೆ ಬಿಟ್ಟೆಯ ಬ್ರಹ್ಮನೆ ನೋಡು ನೀನೇ ಮರುಗುವೇ ಮುದ್ದು ಮುಖದ ಹಸುಳೆಗಳ....
ಶಾಲೆ ಹೆಚ್ಚೇ….
ಪೋಷಕರಿಗೆ ಬುದ್ಧಿ ಹೇಳಿ...ಬಾಲಕಾರ್ಮಿಕ ಪದ್ಧತಿ ನಿಷೇಧಿಸಿ...ಕೂಲಿಗೆ ಕಳಿಸುವವರಿಗೆ...ಕಠಿಣ ಶಿಕ್ಷೆ ನೀಡಿ ...
ಮನೆ ಬೆಳಗುವಳವಳಲ್ಲವೇ…
ಮನೆಯ ದೀಪವಳಲ್ಲವೇ, ಮನೆಯ ಬೆಳಗುವಳವಳಲ್ಲವೇ, ಮನೆಗೆ ಮಹಾಲಕ್ಷ್ಮೀ ಅವಳಲ್ಲವೇ, ಮನೆತನ ವೃಕ್ಷಕ್ಕೆ ಬೇರವಳಲ್ಲವೇ.

ಹರಪನಹಳ್ಳಿ : ರೈತ ವಿರೋಧಿ ಕಾಯ್ದೆ ಖಂಡಿಸಿ ಪ್ರತಿಭಟನೆ
ಹರಪನಹಳ್ಳಿ : ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ರೈತ ವಿರೋಧಿ ಕಾಯ್ದೆಗಳನ್ನು ರದ್ದುಪಡಿಸಬೇಕು.

ಪ್ರತೀ ಗ್ರಾಮಗಳಲ್ಲೂ ಸಹ ಸಾಮಾಜಿಕ ಜಾಲತಾಣದ ಛಾಪು ಮೂಡಿದೆ
ಭಾರತೀಯ ಜನತಾ ಪಕ್ಷದ ಸಾಮಾಜಿಕ ಜಾಲತಾಣ ಇಂದಿನ ದಿನಗಳಲ್ಲಿ ಪ್ರಮುಖ ಮಾಧ್ಯಮವಾಗಿ ಹೊರಹೊಮ್ಮಿದೆ.

ಬಲಿಷ್ಠ ಸಮಾಜ ನಿರ್ಮಾಣಕ್ಕೆ ವಿದ್ಯಾರ್ಥಿಗಳ ಕೊಡುಗೆ ಮುಖ್ಯ
ಪಠ್ಯ ಪೂರಕ ಚಟುವಟಿಕೆಗಳು ಪಠ್ಯ ಚಟುವಟಿಕೆಗಳಿಗೆ ಪ್ರೇರಕ ಮತ್ತು ಶಕ್ತಿ ವರ್ಧಕ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಆಡಳಿತ ಕುಲಸಚಿವರಾದ ಪ್ರೊ. ಗಾಯತ್ರಿ ದೇವರಾಜು ವಿದ್ಯಾರ್ಥಿಗಳಿಗೆ ತಿಳಿಸಿದರು.

ಕೊಟ್ಟೂರೇಶ್ವರ ಶಿಕ್ಷಣ ಮಹಾವಿದ್ಯಾಲಯಕ್ಕೆ `ಎ’ ಗ್ರೇಡ್ ಮಾನ್ಯತೆ : ಸಂಸದ ದೇವೇಂದ್ರಪ್ಪ
ಕೊಟ್ಟೂರು : ರಾಜ್ಯದ ಗ್ರಾಮೀಣ ಭಾಗದ ಮೊದಲ ನ್ಯಾಕ್ ಸಮಿತಿಯಿಂದ ಎ-ಗ್ರೇಡ್ ಮಾನ್ಯತೆ ಪಡೆದ ಏಕೈಕ ಶಿಕ್ಷಣ ಮಹಾವಿದ್ಯಾಲಯ ಕೊಟ್ಟೂರೇಶ್ವರ ಮಹಾವಿದ್ಯಾಲಯವಾಗಿದ್ದು, ಇಂತಹ ಮಹಾವಿದ್ಯಾಲಯದಲ್ಲಿ ಅತ್ಯುತ್ತಮ ಶೈಕ್ಷಣಿಕ ಕಲಿಕೆಯ ಲಾಭ ಪಡಯಿರಿ.

ಮಧ್ಯವರ್ತಿಗಳ ಹಾವಳಿಯಿಂದ ಹೊರಬನ್ನಿ
ಹರಪನಹಳ್ಳಿ : ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರ ನೆರವಿಗಾಗಿ ರಾಗಿ ಖರೀದಿ ಕೇಂದ್ರವನ್ನು ತೆರೆದಿದ್ದು, ತಾಲ್ಲೂಕಿನ ರೈತರು ನೇರವಾಗಿ ಖರೀದಿ ಕೇಂದ್ರದಲ್ಲಿ ರಾಗಿ ಮಾರಾಟ ಮಾಡುವ ಮೂಲಕ ಸದ್ಭಳಕೆ ಮಾಡಿಕೊಳ್ಳುವಂತೆ ಶಾಸಕ ಜಿ. ಕರುಣಾಕರ ರೆಡ್ಡಿ ಹೇಳಿದರು.

ಕೆಲವೇ ಸದಸ್ಯರ ಹಿಡಿತದಲ್ಲಿ ಸಾಮಾನ್ಯ ಸಭೆ
ಮಲೇಬೆನ್ನೂರು : ಇಲ್ಲಿನ ಪುರಸಭೆ ಕೌನ್ಸಿಲ್ ಸಭಾಂಗಣದಲ್ಲಿ ಪುರಸಭೆ ಅಧ್ಯಕ್ಷೆ ನಾಹೀದ ಅಂಜುಂ ಸೈಯದ್ ಇಸ್ರಾರ್ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು.

ಕೆರೆಯ ಕಳೆ ತೆಗೆಯಲು ಸುಸಜ್ಜಿತ ವಿನೂತನ ಯಂತ್ರ…
ಈ ಜಲ ಕಳೆ ನಿರ್ಮೂಲನಾ ಯಂತ್ರದ ಸಹಾಯದಿಂದ ಕೆರೆಯ ಒಳಭಾಗದಿಂದ ಒಮ್ಮೆಲೆ 10 ಟನ್ ಕಳೆಯನ್ನು ಕೆರೆಯ ದಡಕ್ಕೆ ತಳ್ಳಿ ಕೊಡಲಾಗುತ್ತದೆ.

ಹೆಣ್ಣಿಗೆ ಬಲಿಷ್ಠ ಶಕ್ತಿ ಇದ್ದರು… ಬಲಿಷ್ಠ ಮನಸ್ಸಿಲ್ಲ….
ಎಲ್ಲದರಲ್ಲೂ ಆವರಿಸುವವಳಷ್ಟೇ ಅಲ್ಲ... ಪ್ರತಿಯೊಂದನ್ನೂ ಅವತರಿಸುವವಳು ಹೆಣ್ಣು....

ಎಲ್ಲರಿಗೂ ಸಿಗಬೇಕಿದೆ ಸಮಗ್ರ ಮೀಸಲಾತಿ ಅವಕಾಶ
21ನೇ ಶತಮಾನದ ಆರಂಭದಲ್ಲೀಗ ಸೋ ಕಾಲ್ಡ್ ಮುಂದುವರೆದವರೂ ಮೀಸಲಾತಿಯ ಲಾಭಕ್ಕೆ ಕೈ ಚಾಚುತ್ತಿದ್ದಾರೆ.

ದೇಹದ ಕಾಯಿಲೆಗೆ ಆಗಬೇಕು ಸೂಕ್ತ ಪರೀಕ್ಷೆ… ಆದರೆ ಮಣ್ಣಿಗೇಕೆ ಕುರುಡು ಚಿಕಿತ್ಸೆ…?
ನಮ್ಮ ಪೂರ್ವಜರು ಮಣ್ಣಿನಲ್ಲಿರುವ ಸೂಕ್ಷ್ಮ ಜೀವಿಗಳ ಬಗ್ಗೆ ಅಧ್ಯಯನ ಮಾಡಿರಲಿಲ್ಲ. ಆದರೆ ತಮಗೆ ಆಹಾರ ನೀಡುತ್ತಿರುವ ಭೂಮಿ ತಾಯಿಗೆ ತಾವು ಆಹಾರ ನೀಡಬೇಕೆಂಬುದನ್ನು ಮರೆತಿರಲಿಲ್ಲ.

ಎಲ್ಲಿ ಜಾರಿತೋ..!
‘ಕೆಲವ್ರಿಗೆ ಕೆಲವೊಮ್ಮೆ ಸೆನ್ಸ್ ಲೆಸ್ಸು ಮತ್ತೆ ಕಾಮ ಪ್ಲಸ್ಸು ಆಗ್ತತಿ. ಇದನ್ನೇ ಕಾಮನ ಸೆನ್ಸು ಪ್ರಾಬ್ಲಂ ಅಂತಾರಿಪ್ಪಟ್ಟು’

ಸ್ಮಾರ್ಟ್ ಸಿಟಿಗಳಿಗಾಗಿ ಸ್ಮಾರ್ಟ್ ಪರಿಹಾರ
ಮೇಲ್ಮೈ ತ್ಯಾಜ್ಯ ಸಂಗ್ರಹಣಾ ಯಂತ್ರ (Surface waste Collector)